
ಬಾದಾಮಿ,ಮಾ.೨೦: ಒಳಮೀಸಲಾತಿ ರೊಸ್ಟರ್ ವಿರೋಧಿಸಿ, ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿಗಾಗಿ ಒತ್ತಾಯಿಸಿ, ೨೭ನೇ ತಾರೀಖಿನ ವಿಷೇಶ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೀಸಲಾತಿಗೆ ದಕ್ಕೆಯಾಗದಂತೆ ಎಚ್ಚರಿಸಲು ಮಾ. ೨೪ ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಕಾರಣ ತಾವುಗಳೆಲ್ಲ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಗೋಪಾಲ ಜಾಧವ, ಯಲ್ಲಪ್ಪ ಪಾತ್ರೋಟಿ ಕೋರಿದರು.
ಕಾನಿಪ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಂಜಾರ, ಭೋವಿ, ಕೊರಮ, ಕೊರಚ, ಸೂಕ್ಷ÷್ಮ ಪರಿಶಿಷ್ಟ ಜಾತಿಗಳ ಬೃಹತ್ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆ ಸೇರುವ ಜತೆಗೆ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿದೆ. ಎಲ್ಲರ ಪಾಲ್ಗೊಳ್ಳುವ ಮೂಲಕ ಯಶಸ್ಸುಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಮೇಘರಾಜ ರಾಠೋಡ, ಮನೋಹರ ರಾಠೋಡ, ಶಂಕರಾನAದ ಪೂಜಾರ, ಯಂಕಪ್ಪ ಭಜಂತ್ರಿ, ಹುಲಗೆಪ್ಪ ಭೋವಿ, ಸೋಮು ದೊಡಮನಿ, ರುದ್ರೇಶ ಹುಣಸಿಗಿಡದ, ಹುಲ್ಲಪ್ಪ ಚೌಹಾಣ್ ಇದ್ದರು






















