Home ಜಿಲ್ಲೆ ಬಕ್ರೀದ್ : ಮನವಿ

ಬಕ್ರೀದ್ : ಮನವಿ


ನವಲಗುಂದ,ಮೇ.೨೭:
ಬಕ್ರಿದ್ ಹಬ್ಬದ ಪ್ರಯುಕ್ತ ಹಲವರು ಖುರಬಾನಿ ನೀಡುವುದಕ್ಕಾಗಿ ಸಿದ್ದವಾಗಿದ್ದು ಗೋವನ್ನು ಹೊರತುಪಡಿಸಿ ಬೇರೆ ಅನುಮತಿಸಿದ ಪ್ರಾಣಿಗಳ ಕುರಿತು ಗಮನ ಹರಿಸಿ ಹಾಗೂ ಪ್ರಾಣಿ ಬಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷರಾದ ಡಾ. ಅಬ್ದುಲರಝಾಕ ನದಾಫ್ ಅವರು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ನಮ್ಮ ಸೋದರ ಹಿಂದೂ ಸಮಾಜವು ಹಸುವನ್ನು ಗೋಮಾತೆಯಾಗಿ ಪೂಜಿಸುತ್ತದೆ . ನಾವು ಅವರ ಭಾವನೆಗೆ ಧಕ್ಕೆ ಮಾಡುವುದು ಬೇಡ ಹಾಗಾಗಿ ಗುರುವಾರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು. ಧಾರ್ಮಿಕ ನಿಯಮಗಳ ಪ್ರಕಾರ ಯಾರಿಗೆ ಪ್ರಾಣಿ ಬಲಿ ನೀಡುವುದು ಕಡ್ಡಾಯವಾಗಿದೆಯೋ ಅವರು ಈ ಕರ್ತವ್ಯವನ್ನು ನೆರವೇರಿಸಬೇಕು.


ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರು ಸ್ವಯಂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ‘ಯಾರೂ ಕೂಡ ಪ್ರಾಣಿ ಬಲಿ ನೀಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಾರದು. ಮುಖ್ಯವಾಗಿ ಪ್ರಾಣಿ ಬಲಿಯ ಚಿತ್ರ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದರಿAದ ದೂರವಿರಬೇಕು ನಮ್ಮ ಯಾವುದೇ ನಡವಳಿಕೆಯಿಂದ ಇತರರಿಗೆ ತೊಂದರೆ ಅಥವಾ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.