
ನವಲಗುಂದ,ಏ.೭: ದೇಶಾದ್ಯಂತ ‘ಬಾಬುಜಿ’ ಎಂದೇ ಕರೆಯಲ್ಪಡುವ ಜಗಜೀವನ ರಾಮ್ ರವರು ರಾಷ್ಟಿçÃಯ ಧೀಮಂತ ನಾಯಕ, ಸ್ವಾತಂತ್ರ÷್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ÷್ತಮ ಸಂಸದೀಯ ಪಟುವಾಗಿದ್ದರು ಎಂದು ವಾಣಿಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀ ಗಣೇಶ ಧೋoಗಡಿ ಹೇಳಿದರು.
ಅವರು ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ದೇಶದ ಮೊದಲ ಉಪ ಪ್ರಧಾನಿ ಡಾ ಬಾಬು ಜಗಜೀವನರಾಮರವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ÷್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.
ಬಾಲ್ಯದಿಂದಲೂ ಅಸ್ಪöÈಶ್ಯತೆಯ ವಿರುದ್ಧ ಹೋರಾಟ ಮಾಡುತ್ತಾ, ರಾಜಕೀಯದಲ್ಲೂ ತಮ್ಮ ಛಾಪನ್ನು ಮೂಡಿಸಿ ಕೃಷಿಯಲ್ಲಿ ಸಹ ಮಹತ್ತರ ಬದಲಾವನೆಗಳನ್ನು ತಂದು ಹಸಿರು ಕ್ರಾಂತಿಯ ಹರಿಕಾರರು ಎಂದು ಚಿರಪರಿತರಾದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ ಬಿ ಬಾಗಡಿ ಮಾತನಾಡಿ ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪöÈಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು ಎಂದರು.
ಕಾರ್ಯಕ್ರಮದಲ್ಲಿ ಮೊದಲು ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಡಾ ಬಾಬು ಜಗಜೀವನರಾಮ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಗೌರವ ಸಲ್ಲಿಸಿದರು. ಮಲ್ಲಿಕಾರ್ಜುನ ಗಡಾದ ಸ್ವಾಗತಿಸಿ ನಿರೂಪಿಸಿದರು, ವಸಂತ ಮುಂದಿನಮನಿ ವಂದಿಸಿದರು.
ಸಂತೋಷ ಹುಬ್ಬಳ್ಳಿ, ಪ್ರೊಫೆಸರ್ ಸಾತಿಹಾಳ, ಪ್ರಸನ್ನ ಪಂಢರಿ, ನಾಗರತ್ನ ಕುರಡೇಕರ, ಗಂಗಾಧರ, ಶ್ರೀಧರ, ಚೈತ್ರಾ, ಪ್ರತಿಭಾ, ಸಮೀರ, ಪ್ರವೀಣ, ಸುಜಾತಾ, ಚೈತ್ರಾ, ಮಧು, ಗುಲಗಂಧಿ, ರವಿ, ಸುರೇಶ, ಮಂಜುನಾಥ, ಕಲ್ಲೂರ, ಮುಂತಾದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು






















