
ಧಾರವಾಡ,ಏ11: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಅರ್ಜುನ ಪಿಯು ಸೈನ್ಸ್ ಕಾಲೇಜ್ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ದರ್ಶನ್ ಭಟ್ 592 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಮತ್ತು ಕಾಲೇಜಿಗೆ ಪ್ರಥಮ, ಪ್ರಣತಿ ಮೆಣಸುಮನೆ 591 ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಮತ್ತು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಅನಮೋಲ್ ಪ್ರಭು 588 ಅಂಕ, ಅನ್ನಪೂರ್ಣಾ ನಾಯ್ಕ್ 585, ಆದರ್ಶ ಭಟ್ 585, ವಿನೀತ್ ಚೌಹಾನ್ 585, ಅನನ್ಯಾ ಶಾಸ್ತ್ರಿ 584, ಮಾನ್ಯಾ ಹೆಗಡೆ 584, ಚಿನ್ಮಯ್ ಶಾನಭಾಗ 584, ಪ್ರೀತಮ್ ಚವ್ಹಾಣ 584, ಸುಧನ್ವಾ ದೇಶಪಾಂಡೆ 582, ಅನನ್ಯ ಪೂಜಾರ 581, ಇಶಾನ ಶಾನಭಾಗ 580, ನಿಧಿ ಹಬ್ಬು 579, ಸಂಜನಾ ಪಂಡಿತ್ 579, ಆದರ್ಶ ಭಟ್ 578, ಸಿಂಚನಾ ಭಟ್ 578, ವಿಘ್ನೇಶ್ವರ 578, ರೇಣುಕಾ ಪಾಟೀಲ 577, ಸಾಧನಾ ದೇಶಪಾಂಡೆ 577, ದರ್ಶನ್ ನಾಯ್ಕ 576, ಕೇದಾರ ಜೋಶಿ 576, ಸಮೀಕ್ಷಾ ಹೆಗಡೆ 576, ಅನೀಶ್ ನಾಯ್ಕ್ 575, ಪ್ರೀತಂ ಯಡಹಳ್ಳಿ 574, ಸುಶಾಂತ್ ನಾಯ್ಕ್ 574, ಆಕಾಶ್ ರಾಠೋಡ್ 573, ಸೃಜನ್ ಪಾಟೀಲ 573, ಸಚಿನ್ ಜೋಶಿ 572, ಸತೀಶ್ ಹೆಗಡೆ 572, ಯಶಸ್ವಿನಿ ನೆಗಲೂರು 572, ಅನುಜ್ಞಾ ಗಾಂವ್ಕರ್ 571, ಸುಚೇತ್ ಭಟ್ 571, ಅಪೂರ್ವ ಹೆಗಡೆ 570 ಅಂಕ ಪಡೆದಿದ್ದಾರೆ.
ಪರೀಕ್ಷೆ ಬರೆದ ಒಟ್ಟು 151 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ಅಂಕ, 79 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕ ಮತ್ತು 108 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
























