Home ಮುಖಪುಟ ಸುದ್ದಿ ಸಚಿವರ ನೇಮಕ- ಕುಮಾರಸ್ವಾಮಿ ಕೇಳಿ ನಿರ್ಧರಿಸುವುದಿಲ್ಲ

ಸಚಿವರ ನೇಮಕ- ಕುಮಾರಸ್ವಾಮಿ ಕೇಳಿ ನಿರ್ಧರಿಸುವುದಿಲ್ಲ

ಬೆಂಗಳೂರು, ಅ. ೩೦: ಗೃಹ ಇಲಾಖೆ ಯಾರಿಗೆ ನೀಡಬೇಕು, ಮುಖ್ಯಮಂತ್ರಿಯಾಗಿ ಯಾರನ್ನು ನೇಮಿಸಬೇಕು ಎಂಬುದನ್ನು ಎಚ್.ಡಿ. ಕುಮಾರಸ್ವಾಮಿ ಕೇಳಿ ಸರ್ಕಾರ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಮೊದಲು ತಮ್ಮ ಸ್ಥಾನಕ್ಕೆ ಗೌರವ ನೀಡುವುದನ್ನು ಕಲಿಯಬೇಕು. ತಮ್ಮ ಕುರ್ಚಿಗೆ ಅವರೇ ಗೌರವ ಕೊಡದಿದ್ದರೆ ಬೇರೆಯವರು ಹೇಗೆ ಗೌರವ ನೀಡುತ್ತಾರೆ? ಯಾರದೋ ಮಾತು ಕೇಳಿಕೊಂಡು ಇತರರನ್ನು ನಿಂದಿಸಿದರೆ ಮುಂದೆ ಅವರಿಗೇ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಕುಮಾರಸ್ವಾಮಿ ಅವರನ್ನು ’ನಿರುದ್ಯೋಗಿ ಸಚಿವ’ ಎಂದು ವ್ಯಂಗ್ಯವಾಡಿದ ಅವರು, ಅವರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇವರ್ಯಾರು ಸರ್ಟಿಫಿಕೇಟ್ ಕೊಡೋದಕ್ಕೆ ಜೆಡಿಎಸ್ ಸರ್ಟಿಫಿಕೇಟ್ ಕೊಡೋದಕ್ಕೆ ಯಾರು..
ಕುಮಾರಸ್ವಾಮಿ ಸರ್ಟಿಫಿಕೇಟ್ ಕೊಡುವುದಕ್ಕೆ ಯಾರು?
ಬಿಡಿಯಪ್ಪ.. ಅವ್ರು ದಿನಾ ಮಾತಾಡ್ತಾರೆ ಅಂದ್ರೆ ನಾವು ಮಾತಾಡಕ್ ಆಗುತ್ತಾ?
ಅವರಿಗೆ ಕೆಲಸ ಇಲ್ಲ ಅಂದ್ರೆ ನಮಗೆ ಕೆಲಸ ಇಲ್ವಾ ಎಂದು ಲೇವಡಿ ಮಾಡಿದರು
ದೆಹಲಿಯಲ್ಲಿ ಕುಮಾರಸ್ವಾಮಿ ಮನೆ ಮಹಜರು ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಸಿದ ಅವರು
ತನಿಖೆ ಪ್ರಗತಿಯಲ್ಲಿದೆ ಎಂದಷ್ಟೇ ಉತ್ತರ ನೀಡಿ
ಮಹಜರ್ ನಡೆದ ಬಗ್ಗೆ ಖಚಿತವಾಗಿ ಮಾತನಾಡಲಿಲ್ಲ

ಯಾವಾಗ ತನಿಖೆಯ ಮಾಹಿತಿ ಅವಶ್ಯಕತೆ ಇದೆ ಆಗ ಕೊಡ್ತೇವೆ
ನಿನ್ನೆ ಕೆಲ ಮಾಹಿತಿಗಳನ್ನು ಒದಗಿಸಿದ್ದೇವೆ
ಅದರಲ್ಲೂ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ
ತನಿಖೆ ಗೌಪ್ಯವಾಗಿ ಇಡಬೇಕು ಎಂಬ ಕಾರಣಕ್ಕಾಗಿ ಯಾರ್ಯಾರ ಹೆಸರನ್ನು ಉಲ್ಲೇಖಿಸಬೇಕಾಗಿತ್ತು ಉಲ್ಲೇಖಿಸಿಲ್ಲ
ಸಮಯ ಬಂದಾಗ ಅದು ಹೊರಗೆ ಬರುತ್ತೆ ಎಂದರು
ಮಹದೇವಪ್ಪ-ಸಿದ್ದರಾಮಯ್ಯ ವಿಚಾರದಲ್ಲಿ ಸಂಘರ್ಷವಿಲ್ಲ

ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವಿಚಾರವಾಗಿ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಂಘರ್ಷವಿದೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಸರ್ಕಾರದ ವತಿಯಿಂದ ನಡೆಯುವ ಕಾರ್ಯಕ್ರಮಗಳ ಬಗ್ಗೆ ನಮಗೆ ಸ್ಪಷ್ಟವಾದ ಯೋಜನೆ ಇದೆ ಎಂದರು.

ಮಹದೇವಪ್ಪ ಹಿರಿಯ ನಾಯಕರು. ಅವರು ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿದರೆ ಅದಕ್ಕೂ ಸರ್ಕಾರದ ಕಾರ್ಯಕ್ರಮಕ್ಕೂ ಏನು ಸಂಬಂಧ? ಸಂವಿಧಾನ ದಿನಾಚರಣೆಯನ್ನು ನವೆಂಬರ್ ೨೬ರಂದೇ ಆಚರಿಸಬೇಕು. ಕಳೆದ ಬಾರಿಯೂ ಮಹದೇವಪ್ಪ ಅವರು ಸಚಿವರಾಗಿದ್ದಾಗ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳನ್ನು ನಡೆಸಿದ್ದರು. ಇದರಲ್ಲಿ ಸಂಘರ್ಷದ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ನಾಯಕರು ಟೀಕೆಸಿರುವ ಬಗ್ಗೆ ಪ್ರತಿಕ್ರಿಸಿದ ಅವರು
ಯಾರು ಏನೇ ಅಂದ್ರು ಖರ್ಗೆ ಸಾಹೇಬರ ವರ್ಚಸ್ಸಿಗೆ ಧಕ್ಕೆ ಬರಲ್ಲ
ಖರ್ಗೆ ಸಾಹೇಬರು ಹೇಗೆ ಬೆಳೆದು ಬಂದಿದ್ದಾರೆ ಎಂಬುದು ಎಲ್ಲ ಗೊತ್ತಿದೆ ಎಂದರು