
ಲಕ್ಷ್ಮೇಶ್ವರ,ಮಾ14: ತಾಲೂಕಿನ ಹಿರೇ ಮಲ್ಲಾಪುರ ಗ್ರಾಮದಲ್ಲಿ ಎಥೆನಾಲ್ ಕಾರ್ಖಾನೆಯವರು ಈಗಾಗಲೇ 36 ಎಕರೆ ಜಮೀನಿನಲ್ಲಿ ಕಾರ್ಖಾನೆಯನ್ನು ಆರಂಭಿಸುತ್ತಿದ್ದು ಈಗ ಮತ್ತೆ ಹೆಚ್ಚುವರಿಯಾಗಿ 50 ಎಕರೆ ಜಮೀನು ಖರೀದಿಗೆ ಮುಂದಾಗಿದ್ದು ಇದು ಕಾರ್ಖಾನೆಯ ವಿಸ್ತರಣೆಗೋ? ಅಥವಾ ಉಳಿಮೆಗೋ? ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ವೇದಿಕೆಯ ಸದಸ್ಯರು ನಿನ್ನೆ ತಹಶೀಲ್ದಾರ್ ಅವರಿಗೆ ಮನವಿ ನೀಡಿದರು.
ಮನವಿ ಪತ್ರದಲ್ಲಿ ಕಾರ್ಖಾನೆಯವರು ಸಂಬಂಧಿಕರ ಮತ್ತು ಬೇರೆ ಬೇರೆಯವರ ಹೆಸರಿನಲ್ಲಿ ಐವತ್ತು ಎಕರೆ ಜಮೀನನ್ನು ಖರೀದಿ ಮಾಡುತ್ತಿದ್ದು ಈಗಾಗಲೇ ಕಾರ್ಖಾನೆಗೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹೆಚ್ಚುರಿಯಾಗಿ ಐವತ್ತು ಎಕರೆಯ ಖಾತೆಯ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಲಾಗಿದೆ.
ಈ ಕಾರ್ಖಾನೆ ಆರಂಭವಾಗುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದ್ದು ಪಕ್ಕದಲ್ಲಿಯೇ ಸರಕಾರಿ ಶಾಲೆಯಿದ್ದು ಈ ಎಲ್ಲಾ ಅಂಶಗಳನ್ನು ಗಮನಿಸಿ ತಹಶೀಲ್ದಾರರು ಕಂಪನಿಯವರ ಜಮೀನು ಖರೀದಿಯ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ನಂತರವೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಜಯ ಕರ್ನಾಟಕ ವೇದಿಕೆ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ವೇದಿಕೆಯ ತಾಲೂಕ ಘಟಕದ ಅಧ್ಯಕ್ಷ ಇಸ್ಮಾಯಿಲ್ ಆಡೂರ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಇಶಾಕ್ ಭಾಷಾ ಹರಪನಹಳ್ಳಿ ನಾಗರಾಜು ಉಪ್ಪಾರ ಎಲ್ಲಪ್ಪ ಹಂಜಗಿ ಬಸವರಾಜ್ ಮೇಲ್ಮುರಿ ಶಾಹಿದ್ ಉಳ್ಳಟ್ಟಿ ಅಬ್ದುಲ್ ಕರೀಂ ಎ ಎಂ ಕೊಪ್ಪಳ ಮಂಜುನಾಥ ಶಿರಹಟ್ಟಿ ಬಸಣ್ಣ ಮೂಕಿ ಮೈ ನು ಮೋಮಿನ್ ಜಗದೀಶ್ ತಳವಾರ್ ಮಲ್ಲು ಕಡಕೋಳ ಹನುಮಂತಪ್ಪ ಬೆಟಿಗೇರಿ ಮಹದೇವಪ್ಪ ತಳವಾರ್ ಹನುಮಂತಪ್ಪ ಕಿಳ್ಳಿ ಕ್ಯಾತರ್ ಸೇರಿದಂತೆ ಅನೇಕರಿದ್ದರು.






















