
ನವಲಗುಂದ,ಮಾ12 : ತಾಲ್ಲೂಕಿನ ಗುಡಿಸಾಗರ-ನಾಗನೂರ ಸರಕಾರಿ ಪ್ರೌಢ ಶಾಲೆ ವಾರ್ಷಿಕೋತ್ಸವ, ಸರಸ್ವತಿ ಪೂಜೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಗುರುನಾಥ ಉಳ್ಳಾಗಡ್ಡಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎ ಬಿ ಕೊಪ್ಪದ ಮಾತನಾಡಿ ಇಂದಿನ ದಿನಮಾನದಲ್ಲಿ ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರಷ್ಟೆ ಪೆÇೀಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೆÇೀಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ,ಶಿಸ್ತು, ಧೈರ್ಯ ಈ 3 ಗುಣಗಳನ್ನು ಮಕ್ಕಳಿಗೆ ಧಾರೆಯೆರಯಬೇಕು. ಯಾವ ಕಾರಣಕ್ಕೂ ಮಕ್ಕಳು ಓದುವಾಗ ಟಿವಿ ಹಾಕಬೇಡಿ. ನಿಶ್ಯಬ್ಧ ಪರಿಸರ ಇರಲಿ ಎಂದರು.
ವಿದ್ಯಾರ್ಥಿಗಳಿಂದ ಶಾರದಾ ಮಾತೆ ಪೂಜಾ, ಹಾಗೂ ವಿದ್ಯಾರ್ಥಿಗಳಿಗೆ ದೀಪದಾನ ಕಾರ್ಯಕ್ರಮ ಜರುಗಿತು. ಶಾಲಾ ಮುಖ್ಯೋಪಾದ್ಯಾಯರಾದ ಇಂದುಮತಿ. ವಿಷ್ಣುನಾಯಕ ದೀಪದಾನ ನೇರವೇರಿಸಿದರು. ಎಲ್. ವಾಯ್. ರಾಯಪ್ಪನವರ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಮುತ್ತಣ್ಣರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಗಾವಣೆಗೊಂಡ ಹಿಂದಿ ಶಿಕ್ಷಕಿ ಮಂಜುಕುಮಾರಿ ರಜಪೂತ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಎಲ್ಲ ಗುರುಗಳಿಗೆ ಗುರುವಂದನೆ ಸಲ್ಲಸಿದರು. ಇದೆ ವೇಳೆ ಆದರ್ಶ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಅತಿಥಿಗಳಾಗಿ ಬಾಬುಗೌಡ ಕುಲಕರ್ಣಿ, ಗಿರೀಶ ದೇವರಡ್ಡಿ, ಭೀಮಣ್ಣ ಪಟ್ಟೆದ, ಗುರುಲಿಂಗಯ್ಯ. ಹಿರೇಮಠ, ಫಕ್ಕೀರೇಶ ಪಡೆಸೂರ, ಬಾಬುಗೌಡ ಕಲ್ಲಿ, ಮಂಜು ಖಣ್ಣೂರ, ಲಕ್ಷ್ಮಣ ಪೂಜಾರ, ನಾಗಲಿಂಗಪ್ಪ. ಉಳ್ಳೇಗಡ್ಡಿ, ಬಾಗೂರ, ಭೂದಾನಿ ಶಂಭುಲಿಂಗಪ್ಪ ಹೊಳೆಯಣ್ಣವರ, ದಿವಾನಸಾಬನವರ ಮತ್ತು ಶಾಲೆ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.
ಶಿಕ್ಷಕ ಅರವಿಂದ ಪಾಟೀಲ ಪ್ರಾರ್ಥನೆ, ಸುಜಾತ ನಾಯ್ಕರ ನಿರೂಪಣೆ, ರೇಣವ್ವ ಪೂಜಾರ ವಂದಿಸಿದರು.






















