
ಸತ್ತೂರು,ಮಾ21: ಕಳೆದ 11 ವರ್ಷಗಳಿಂದ ನಿರಂತರವಾಗಿ ಪಾರಾಯಣ ಮತ್ತು ಜ್ಞಾನ ಯಜ್ಞ ಕಾರ್ಯಕ್ರಮ ಮಾಡುವ ಸತ್ಸಂಗ ಸ್ಥಾಪಿಸಿದ ಸತ್ತೂರಿನ ನಾರಾಯಣ ಪಾರಾಯಣ ಬಳಗವು ಹೆಮ್ಮರವಾಗಿ ಬೆಳೆಯಲಿ ಎಂದು ಪಂ. ವಾದಿರಾಜಾಚಾರ್ಯ ಮಠದವರು ಹಾರೈಸಿದರು.
ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಜರುಗಿದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಯುಗಾದಿ ಹಬ್ಬದ ನಿಮಿತ್ತ ನಡೆದ ಪಂಚಾಂಗ ಶ್ರವಣದಲ್ಲಿ ಮಾತನಾಡುತ್ತಾ ಪಂಚಾಂಗದ ಅಂಗಗಳಾದ ತಿಥಿ, ವಾರ, ನಕ್ಷತ್ರ , ಯೋಗ ಕರ್ಣ ಗಳನ್ನು ಶ್ರವಣ ಹಾಗೂ ಪಠಣ ಬಲದಿಂದ ಆರೋಗ್ಯ, ಐಶ್ವರ್ಯ, ಕಾರ್ಯಸಿದ್ಧಿ ಹಾಗೂ ರೋಗ ರುಜಿನದಿಂದ ಮುಕ್ತಿ, ಮುಂತಾದ ಲಭಿಸುತ್ತದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿಯುವಾಯು ಗುರುಗಳ ಸ್ತೋತ್ರಗಳ ಪಾರಾಯಣ ಮತ್ತು ನಾರಾಯಣಿ ಭಜನಾ ಮಂಡಳಿಯಿಂದ ಭಜನೆ ಜರಗಿತು ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಆನಂದ ದೇಶಪಾಂಡೆ, ಕೃಷ್ಣ ಹುನಗುಂದ್, ಡಾ. ಶ್ರೀನಾಥ್, ಡಿಕೆ ಜೋಶಿ, ಹನುಮಂತ ಪುರಾಣಿಕ, ಕೇಶವ ಕುಲಕರ್ಣಿ, ಶ್ರೀನಿವಾಸ ಪಟ್ಟಣಕೊಡಿ , ನಾಗೇಶ ನರಸಾಪುರ, ಸಂಜೀವ ಗೋಳಸಂಗಿ, ಧೀರೇಂದ್ರ ತಂಗೋಡ , ರವಿ ದುಮ್ಮವಾಡ ವಿಠ್ಠಲಂಬೇಕರ್ ಎಲ್. ವಿ. ಜೋಶಿ, ಕಟ್ಟಿ ರಂಗನಾಥ, ಗುರುನಾಥ, ವಿನಾಯಕ ಸರ ದೇಶಮುಖ, ನಾಗೇಶ್ ಕುಲಕರಣಿ, ರಾಘವೇಂದ್ರ ಮುಂಡಗೋಡ, ಗುರುರಾಜ ಜೋಶಿ, ವಿಲಾಸ ಸಬ್ನೀಸ್, ಸಂಜೀವ ಜೋಶಿ ಪಾಂಡುರಂಗ ಕುಲಕರ್ಣಿ, ವಿಶ್ವನಾಥ್ ಕಾಂಗೋ, ಅಶೋಕ್ ಬಹದ್ದೂರ್ ದೇಸಾಯಿ ,ಕೆ ಪಿ ಗುಡಿ, ಮುಂತಾದ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.






















