Home ಜಿಲ್ಲೆ ಮೃತ ಬಾಲಕರ ಕುಟುಂಬಕ್ಕೆ ಅಮೀನರೆಡ್ಡಿ ಸಾಂತ್ವನ

ಮೃತ ಬಾಲಕರ ಕುಟುಂಬಕ್ಕೆ ಅಮೀನರೆಡ್ಡಿ ಸಾಂತ್ವನ

ಸAಜೆವಾಣಿ ವಾರ್ತೆ
ಕೆಂಭಾವಿ:ಎ.೧:ನಗನೂರ ಗ್ರಾಮದಲ್ಲಿ ಸಂಭವಿಸಿದ ದುರಂತದಲ್ಲಿ ಒಂದೆ ಕುಟುಂಬದ ನಾಲ್ಕು ಜನ ಮಕ್ಕಳು ಹೊಲದಲ್ಲಿ ನಿರ್ಮಿಸಿದ ಕೃಷಿ ಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸುದ್ದಿ ತಿಳಿದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ, ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ರಾಜಶೇಖರ ಗೂಗಲ ನೇತೃತ್ವದ ಬಿಜೆಪಿ ಮುಖಂಡರು ಮೃತ ಕುಟುಂಬದ ಮನೆಗೆ ಭೇಟಿ ಸಾಂತ್ವನ ಹೇಳಿದರು.
ಇದಕ್ಕೂ ಮೊದಲು ಬಿಜೆಪಿ ಮುಖಂಡರು ಕೃಷಿ ಹೊಂಡಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸರಿಯಾದ ಸುರಕ್ಷಿತ ಕ್ರಮವಿಲ್ಲದೆ ಇರುವದರಿಂದ ಇಂತಹ ಅನಾಹುತ ಜರಗುವದಕ್ಕೆ ಕಾರಣವಾಗಿದೆ ಎಂದು ಮುಖಂಡರು ತಿಳಿಸಿದರು. ಈ ಸಂದರ್ಭದಲ್ಲಿ ಶಹಾಪುರ ತಾಲೂಕಾಧ್ಯಕ್ಷ ತಿರುಪತಿ ಹತ್ತಿಕಟಕಿ, ತಿರುಪತಿ ಸೇರಿ, ಶಾಂತಣ್ಣ ಚೆನ್ನೂರು, ಮಲ್ಲಣ್ಣ ಶಾಖಾ ಸೇರಿದಂತೆ ಅನೇಕ ಮುಖಂಡರಿದ್ದರು.