
ಕಲಬುರಗಿ,ಏ 15: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಆಯೋಜಿಸಲಾಯಿತು.ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ ಅಂಬೇಡ್ಕರ್ ಭಾವ ಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಅಂಬೇಡ್ಕರ್ ಆಶಯದಂತೆ ಸಮ ಸಮಾಜದ ನಿರ್ಮಾಣ ಹಾಗೂ ಪ್ರತಿಯೊಬ್ಬರಿಗೆ ಶಿಕ್ಷಣ ದೊರಕಬೇಕು ಎಂಬುದಾಗಿತ್ತು. ಹಾಗಾಗಿ ನಾವೆಲ್ಲರೂ ಶಿಕ್ಷಣವನ್ನು ಪಡೆದು ಸಮ ಸಮಾಜದ ನಿರ್ಮಾಣ ಹಾಗೂ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ನಿಜವಾದ ಅರ್ಥದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿದಂತೆ ಆಗುವುದು ಎಂದು ಹೇಳಿದರು.ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ಸುರೇಶ್ ಮಾತನಾಡಿದರು. ಸಂಸ್ಥೆಯ ಬಂದಿಗಳು ಅಂಬೇಡ್ಕರ್ ಕುರಿತು ಗೀತೆ ಹಾಗೂ ಭಜನೆಗಳನ್ನು ಹಾಡಿದರು. ನಂತರ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಆಧೀಕ್ಷಕ ಚನ್ನಪ್ಪ ಯಟಗಲ್, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲಿಕ ಟಿ.ಕೆ ಹಾಗೂ ಅಧಿಕಾರಿ,ಸಿಬ್ಬಂದಿಗಳು ವೃಂದದವರು ಭಾಗವಸಿದ್ದರು. ಭೀಮಾಶಂಕರ್ ಡಾಂಗೆ ಸ್ವಾಗತಿಸಿದರು. ನಿರೂಪಣೆ ಮತ್ತು ವಂದಾನಾರ್ಪಣೆಯನ್ನು ಸಂಸ್ಥೆ ಶಿಕ್ಷಕ ನಾಗರಾಜ ಮೂಲಗೆ ನಡೆಸಿಕೊಟ್ಟರು.






















