
ಯಾದಗಿರಿ:ಏ.೧೪: ಜಿಲ್ಲೆಯ ಹುಣಸಗಿ ತಾಲೂಕು, ಕೊಡೆಕಲ್ ಹೋಬಳಿ ವ್ಯಾಪ್ತಿಯ ರಾಯನಪಾಳ್ಯ-ದಾಸರಗೋಡ ಪ್ರದೇಶದಲ್ಲಿರುವ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿದಂತೆ ಸಾಗುತ್ತಿದ್ದು, ಪರಿಸರ ಹಾನಿ ಮತ್ತು ಕಾನೂನು ಉಲ್ಲಂಘನೆಗಳ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸರ್ವೆ ನಂ.೧೪೬ಕ್ಕೆ ಸಂಬAಧಿಸಿದ ಈ ಪ್ರದೇಶದಲ್ಲಿ ನಡೆದಿರುವ ಬೆಳವಣಿಗೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಗ್ರಾಮಸ್ಥರ ಪ್ರಕಾರ, ಹನುಮಪ್ಪ ಗುಂಡಲಗೇರಿ ಎಂಬ ವ್ಯಕ್ತಿಗೆ ಕೇವಲ ನಾಲ್ಕು ಎಕರೆ ಖಾಸಗಿ ಜಮೀನು ಇದ್ದರೂ, ಅದನ್ನು ಆಧಾರ ಮಾಡಿಕೊಂಡು ಸುತ್ತಮುತ್ತಲಿನ ೨೦೦ ಎಕರೆಗೂ ಹೆಚ್ಚು ಸರ್ಕಾರಿ ಅರಣ್ಯ ಮತ್ತು ಗುಡ್ಡ ಪ್ರದೇಶವನ್ನು ಅಕ್ರಮವಾಗಿ ತನ್ನದಾಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದಾನೆ ಎನ್ನಲಾಗಿದೆ. “ಯಾರೇ ಬಂದರೂ ಇದು ನನ್ನ ಜಾಗ” ಎಂದು ಬೆದರಿಕೆ ಹಾಕುತ್ತಾ, ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದು ಮಾರಾಟ ಮಾಡಿರುವುದಾಗಿ ಗಂಭೀರ ಆರೋಪಗಳು ಕೇಳಿಬಂದಿವೆ.
ಘಟನೆಯ ಮತ್ತೊಂದು ಆಘಾತಕಾರಿ ಅಂಶವೆAದರೆ, ಸೋಮವಾರ ಸಂಜೆ ಸುಮಾರು ೭ ಗಂಟೆಯ ವೇಳೆಗೆ ಇದೇ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಆರೋಪ. ಈ ಬೆಂಕಿಯಿAದ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿದ್ದು, ಪರಿಸರ ಸಮತೋಲನಕ್ಕೆ ಭಾರೀ ಧಕ್ಕೆ ಉಂಟಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಮಟ್ಟದ ಗಂಭೀರ ಕೃತ್ಯಕ್ಕೂ ಸಂಬAಧಿಸಿದ ವ್ಯಕ್ತಿಗೆ ಯಾವುದೇ ರೀತಿಯ ಕಾನೂನು ಭಯವಿಲ್ಲದಂತಾಗಿದೆ ಎಂಬ ಮಾತುಗಳು ಗ್ರಾಮದಲ್ಲಿ ಹರಿದಾಡುತ್ತಿವೆ.
ಅಕ್ರಮ ಮರಳು ಗಣಿಗಾರಿಕೆಗೂ ಅಡ್ಡಿಲ್ಲ:
ಇದಕ್ಕೂ ಮೀರಿ, ಇದೇ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಸಾರ್ವಜನಿಕ ಸಂಪತ್ತಿನ ದೋಚಾಟಕ್ಕೆ ತುತ್ತಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಯದ ನೆರಳಲ್ಲಿ ಊರು:
ಆರೋಪಿತನಿಗೆ ಯಾವುದೇ ಕಾನೂನು ಭಯವಿಲ್ಲದೆ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ತನ್ನ ಅಣ್ಣ-ತಮ್ಮಂದಿರ ಬೆಂಬಲವಿರುವುದರಿAದ ಇಡೀ ಊರೇ ಈತನ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಬೆದರಿಕೆ ಹಾಗೂ ದಬ್ಬಾಳಿಕೆಗಳಿಂದ ಜನರು ಬಾಯಿಬಿಟ್ಟುಕೊಳ್ಳಲು ಹೆದರುತ್ತಿದ್ದಾರೆ.
ಇಷ್ಟೇ ಅಲ್ಲದೆ, ಯಾವುದೇ ಅಧಿಕೃತ ದೂರು ನೀಡಲು ಜನರು ಮುಂದೆ ಬರುತ್ತಿಲ್ಲ. “ದೂರು ಕೊಟ್ಟರೆ ನಮ್ಮ ಮೇಲೆಯೇ ತೊಂದರೆ ಉಂಟಾಗಬಹುದು” ಎಂಬ ಭಯದಿಂದ ಗ್ರಾಮಸ್ಥರು ಗುಪ್ತವಾಗಿ ಮಾತ್ರ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ಆಸ್ತಿ ದುರುಪಯೋಗ ಶಂಕೆ:
ಆರೋಪಿತನು ತನ್ನ ಹೆಂಡತಿ ನಿಂಗಮ್ಮ ಅವರ ಹೆಸರಿನಲ್ಲಿ ಸರ್ಕಾರಿ ಆಸ್ತಿಯನ್ನು ಹೊಂದಿರುವ ಬಗ್ಗೆ ಕೂಡ ಶಂಕೆಗಳು ವ್ಯಕ್ತವಾಗಿದ್ದು, ಈ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ:
ಸರ್ಕಾರಿ ಅರಣ್ಯ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಪಡಿಸಿದ ಆರೋಪಿಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಒತ್ತುವರಿ ತೆರವುಗೊಳಿಸಿ, ಮರಗಳ ಕಡಿತ, ಬೆಂಕಿ ಹಚ್ಚುವಿಕೆ ಹಾಗೂ ಮರಳು ಗಣಿಗಾರಿಕೆ ಸೇರಿದಂತೆ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಕುರಿತು ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ವಾಸ್ತವಾಂಶಗಳನ್ನು ಬಹಿರಂಗಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.






















