
ಸಂಜೆ ವಾಣಿ ವಾರ್ತೆ
ಜಮಖಂಡಿ: ಮಾ.೨೪: ದಿ ಜನತಾ ಕಂಜುಮರ್ ಕೋ-ಆಪರೇಟಿವ್ ಹೋಲ್ಸೇಲ್ ಸ್ಟೋರ್ಸ್ ಲಿ., ಜಮಖಂಡಿ ಇದರ ಚುನಾವಣೆಯು ದಿನಾಂಕ ೧೭.೧೦.೨೦೨೫ ರಂದು ನಡೆದಿದ್ದು, ಮತ ಎಣಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಬಳಿಕ ಧಾರವಾಡ ನ್ಯಾಯಾಲಯದ ಆದೇಶದಂತೆ ೦೫.೦೩.೨೦೨೬ ರಂದು ಪ್ರಕರಣ ವಜಾಗೊಂಡ ಹಿನ್ನೆಲೆಯಲ್ಲಿ, ದಿನಾಂಕ ೨೩.೦೩.೨೦೨೬ ರಂದು ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಶಶಿಕಾಂತ ಹಣಮಂತ ಗಲಗಲಿ ಹಾಗೂ ಸಿದ್ದಣ್ಣ ರಾಮಪ್ಪ ಬಿಳ್ಳೂರ ಇವರ ನಡುವೆ ನಡೆದ ಪೈಪೋಟಿಯಲ್ಲಿ ಶಶಿಕಾಂತ ಗಲಗಲಿ ಅವರು ೮ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಸಿದ್ದಣ್ಣ ಬಿಳ್ಳೂರ ಅವರು ೬ ಮತಗಳನ್ನು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಮುತ್ತಣ್ಣ ಲಕ್ಷ್ಮಣ ಮೇತ್ರಿ ಹಾಗೂ ಗೀತಾ ಯಶವಂತ ಸೂರ್ಯವಂಶಿ ಇವರ ನಡುವೆ ನಡೆದ ಚುನಾವಣೆಯಲ್ಲಿ ಮುತ್ತಣ್ಣ ಮೇತ್ರಿ ಅವರು ೮ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಗೀತಾ ಸೂರ್ಯವಂಶಿ ಅವರು ೬ ಮತಗಳನ್ನು ಪಡೆದು ಪರಾಭವಗೊಂಡರು.
ಸುಮಾರು ೨೦ ವರ್ಷಗಳ ಕಾಲ ಬಿಜೆಪಿ ಪಕ್ಷದ ಅಧೀನದಲ್ಲಿದ್ದ ಈ ಸಹಕಾರಿ ಸಂಸ್ಥೆ ಇದೀಗ ಕಾಂಗ್ರೆಸ್ ಪಕ್ಷದ ವಶಕ್ಕೆ ಬಂದಿದ್ದು, ಈ ಗೆಲುವು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಪರಿಶ್ರಮದ ಫಲವಾಗಿದೆ ಎಂದು ಅಧ್ಯಕ್ಷ ಶಶಿಕಾಂತ ಗಲಗಲಿ ಹಾಗೂ ಉಪಾಧ್ಯಕ್ಷ ಮುತ್ತಣ್ಣ ಮೇತ್ರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























