Home ಜಿಲ್ಲೆ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ

ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ಧ ಕ್ರಮ

ಗದಗ,ಏ2: ಮಾರ್ಚ 2026 ತಿಂಗಳಲ್ಲಿ ಡಾ.ವೈ.ಕೆ.ಭಜಂತ್ರಿ ಜಿಲ್ಲಾ ಜಾರಿ ಅಧಿಕಾರಿಗಳು ಗದಗ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಾಲೂಕಾ ತನಿಖಾ ದಳ ಪೆÇಲೀಸ್ ಇಲಾಖೆ ಪುರಸಭೆ ಸ್ಥಳಿಯ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಗದಗ ನಗರ,ನರಸಾಪುರ, ಶಿರಹಟ್ಟಿ ತಾಲೂಕಿನ ಸೂರಣಗಿ, ನರಗುಂದ ಪಟ್ಟಣ, ಮುಂಡರಗಿ ತಾಲೂಕಿನ ಡಂಬಳ, ರೋಣ ಪಟ್ಟಣದಲ್ಲಿ ಕೋಟ್ಪಾ ದಾಳಿ ಹಮ್ಮಿಕೊಂಡು ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆ 2003 ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, 52 ಪ್ರಕರಣ ದಾಖಲಿಸಿ, ರೂ. 25050 ದಂಡ ವಿಧಿಸಿ ಕ್ರಮ ಕೈಗೊಳ್ಳಲಾಯಿತು,

ಕೋಟ್ಪಾ ಕಾಯ್ದೆ ಸೆಕ್ಷನ್ 4. ಕಾಯ್ದೆ ಉಲ್ಲಂಘನೆಯಾದಲ್ಲಿ ದಂಡದ ಮೊತ್ತ ರೂ.1000/- ವಾಗಿದ್ದು ಧೂಮಪಾನದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವದನ್ನು ನಷೇಧಿಸಲಾಗಿದೆ. ಹಾಗೂ ಸೆಕ್ಷನ್ 6ಎ ಪ್ರಕಾರ 21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನನಿಷೇಧಿಸಲಾಗಿದ್ದು ಈ ಸೆಕ್ಷನ್ ರೂ.1000/-ವರೆಗೆ ದಂಡ ಹೆಚ್ಚಿಸಲಾಗಿದೆ. ಸೆಕ್ಷನ್ 6ಬಿ ಪ್ರಕಾರ ಶಾಲಾ ಕಾಲೇಜುಗಳ ಸುತ್ತ 100 ಗಜದವರೆಗೆ ತಂಬಾಕು ಉತ್ಪನ್ನಗಳ ನಿಷೇಧಿಸಲಾಗಿದ್ದರು ಸಹ ಕೆಲವು ಸ್ಥಳಗಳಲ್ಲಿ ಮಾರಾಟ ಮಾಡುತ್ತಿರುವದು ಕಂಡುಬಂದಿದ್ದು ಅಂತಹ ಅಂಗಡಿಗಳ ವಿರುದ್ಧ ದಂಡ ವಿಧಿಸಿ ಅಂಗಡಿಗಳನ್ನು ಮುಚ್ಚಿಸಿ ಕ್ರಮ ವಹಿಸಲಾಯಿತು. ಪಾನ್ ಬೀಡಾ ಅಂಗಡಿ ,ಹೋಟೆಲ್‍ಗಳÀಲ್ಲಿ ಅನಧಿಕೃತ ಧೂಮಪಾನ ಅಡ್ಡಾಗಳು ಮಾಡಿಕೊಂಡು ಸಾರ್ವಜನಿಕರ ಜೀವದ ಜೋತೆ ಚೆಲ್ಲಾಟವಾಡುತ್ತಿದ್ದು, ಈ ರೀತಿಯ ಸಾರ್ವಜನಿಕ ಸ್ಥಳಗಳಲ್ಲಿ ಧೂವiಪಾನ ಮಾಡುವದರಿಂದ ಅವರು ಸೇವಿಸಿ ಬಿಟ್ಟ ಹೊಗೆಯಿಂದ ಅಮಾಯಕರು ಆ ಹೊಗೆ ಸೇವನೆಯಿಂದ ಪರೋಕ್ಷ ಧೂಮಪಾನಿಗಳಾಗಿ ತಂಬಾಕು ಸೇವೆನೆಯಿಂದಾಗುವ ಅಪಾಯಕಾರಿ ಕ್ಯಾನ್ಸರ್,ಹೃದಯ ಸಂಬಂಧಿ ಕಾಯಿಲೆ, ಪಾಶ್ರ್ವವಾಯ, ಇತರ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕೃತ ಸೆಕ್ಷನ್ 4 ಹಾಗೂ ಸೆಕ್ಷನ್ 6ಎ ನಾಮಫಲಕ ಕಡ್ಡಾಯವಾಗಿ ಸ್ಥಳದ ಮಾಲಿಕರು ಬಿತ್ತರಿಸಬೇಕು,ಕಾರಣ ಶಾಲಾ ಕಾಲೇಜುಗಳ ಸುತ್ತಲಿನ ತಂಬಾಕು ಮಾರಾಟಗಾರರು ಮಾರಾಟ ನಿಲ್ಲಿಸದಿದ್ದಲ್ಲಿ ಮುಂದಿನ ದಿನ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕಟಣೆ ತಿಳಿಸಿದೆ.

ದಾಳಿಯಲ್ಲಿ ಗೋಪಾಲ ಸುರಪುರ ಜಿಲ್ಲಾ ಸಲಹೆಗಾರರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಗದಗ. ರಾಜೇಂದ್ರಗಡಾದ, ಸಿ.ಆರ್.ಹಾದಿಮನಿ, ಪ್ರಕಾಶ ಕರ್ಜಗಿ, ಶ್ರೀಮತಿ,ಮಂಜುಳಾ ಸಜ್ಜನ್, ಐ.ಆರ್.ಗಂಜಿ ಎಸ್.ಆರ್.ದೆಸಾಯಿ. ಸಿ.ಕುಂಬಾರ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಪೆÇಲೀಸ್ ಇಲಾಖೆಯ ಎಸ್.ಎಸ್.ಚಿನ್ನಪ್ಪಗೌಡರ, ಶೇµಮಗೌಡರ ಪಟ್ಟಣ ಪಂಚಾಯತ್‍ನ ಗಿರೀಶ್ ನರಗುಂದ, ಶ್ರೀಮತಿ ಬಸಮ್ಮ ಚಿತ್ತರಗಿ ಸಾಮಾಜಿಕ ಕಾರ್ಯಕರ್ತೆ, ಆರ್.ಡಿ.ಪಿಆರ್ .ವಿಶ್ವವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು. ಉಪಸ್ಥಿತರಿದ್ದರು.