Home ಜಿಲ್ಲೆ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆ

ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆ

ಧಾರವಾಡ, ಅ. ೩೦: ಜೈಪುರದಲ್ಲಿ ಅಕ್ಟೋಬರ್ ೧೫ ರಿಂದ ೧೬ ರವರೆಗೆ ನಡೆದ ೨೩ ವಯೋಮಿತಿ ಒಳಗಿನ ೬ ನೇ ಇಂಡಿಯನ್ ಓಪನ್ ನ್ಯಾಷನಲ್ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟು ಪ್ರೀಯಾಂಕ ಓಲೇಕಾರ ಅವರು ೪೦೦ ಮೀ. ಹರ್ಡಲ್ಸ್ ನಲ್ಲಿ ಭಾಗವಹಿಸಿ, ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.


ಅಕ್ಟೋಬರ್ ೨೩ ರಿಂದ ೨೭ ರವರೆಗೆ ಚನೈನಲ್ಲಿ ನಡೆದ ೪೧ ನೇ ಜೂನಿಯರ್ ನ್ಯಾಷನಲ್ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿಲ್ಪಾ ಹೊಸಮನಿ ಅವರು ೮೦೦ ಮೀ ಹಾಗೂ ೧೫೦೦ ಮೀ ಓಟದಲ್ಲಿ ಭಾಗವಹಿಸಿ, ೦೨ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಹಾಗೂ ಲಕ್ಮೀ ಓಬಣ್ಣವರ ಅವರು ೧೦೦೦ ಮೀ. ಮೀಡ್ಲ್ ರಿಲೇಯಲ್ಲಿ ಭಾಗವಹಿಸಿ, ಕಂಚಿನ ಪದಕ ಪಡೆದಿರುತ್ತಾರೆ. ಮತ್ತು ಮಣೀಕಂಠ ಗೌಡ, ಅಭಯ, ಅಭಿ.ಎಲ್.ಹೆಚ್, ಸಂದೀಪ ವಡ್ಡರ, ಸುಪ್ರೀತಾ ಸಿದ್ದಿ, ಸಾನಿಯಾ ಸಾಬ ಇವರೆಲ್ಲರೂ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ಸ್ ಕ್ರೀಡಾಪಟುಗಳಾಗಿರುತ್ತಾರೆ.


ಎಲ್ಲ ವಿಜೇತ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸದಾನಂದ.ಎಚ್.ಅಮರಾಪುರ, ಭೀಮಣ್ಣವರ ಜಿಲ್ಲಾ ಓಲಂಪಿಕ್ ಅಸೋಸಿಯೇಷನ್ ಖಜಾಂಚಿ ಹಾಗೂ ಇಲಾಖೆಯ ಅಥ್ಲೇಟಿಕ್ಸ್ ತರಬೇತುದಾರರಾದ ಶಾಮಲಾ ಪಾಟೀಲ ಅವರು ಸನ್ಮಾನಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಎಲ್ಲ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.