
ತಾಳಿಕೋಟೆ: ಪಟ್ಟಣದ ಮೈಲೇಶ್ವರ ಕ್ರಾಸ್ನ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವದರ ಮೂಲಕ ಶೈಕ್ಷಣಿಕ ವರ್ಷ ಶಾಲಾ ಪ್ರಾರಂಭೋತ್ಸವವನ್ನು ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಹೂವಿನಿಂದ ಪುಷ್ಪಾರ್ಚನೆ ಗೈಯುವದರೊಂದಿಗೆ ಗುಲಾಬಿ ಹೂವು ನೀಡಿ ಶಾಲೆಯೊಳಗೆ ಬರಮಾಡಿಕೊಳ್ಳಲಾಯಿತ್ತಲ್ಲದೇ ಸರಸ್ವತಿ ಮಹಾ ಪೂಜೆ ಸಲ್ಲಿಸಲಾಯಿತು.
ಪರಿಸರ ದಿನಾಚರಣೆ ಎಂದರೆ ಕೇವಲ ಸಸಿ ನಡುವದಷ್ಟೇ ಅಲ್ಲಾ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚತೆಯಾಗಿ ಇಟ್ಟುಕೊಳ್ಳುವದಾಗಿದೆ ಕಸವನ್ನು ಸೇಕರಿಸಿ ಗೊಬ್ಬರವನ್ನಾಗಿ ತಯಾರಿಸುವ ಅನೇಕ ವಿಜ್ಞಾನದ ಪಠ್ಯ ಪುಸ್ತಕಗಳಲ್ಲಿ ಬಂದಿವೆ ಪರಿಸರ ದಿನಾಚರಣೆಯ ಮಹತ್ವವನ್ನು ಅರೀತುಕೊಂಡು ಎಲ್ಲರು ಸಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಭಂದ ಸ್ಪರ್ದೆ, ಭಾಷಣ ಸ್ಪರ್ದೆ, ರಸ ಪ್ರಶ್ನೇ ಸ್ಪರ್ದೆಯನ್ನು ಆಯೋಜಿಸಲಾಗಿತ್ತು.
ಈ ಸಮಯದಲ್ಲಿ ಪತ್ರಕರ್ತರಾದ ಪ್ರವೀಣ ಘೋರ್ಪಡೆ, ನಿವೃತ್ತ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ, ಕಾರ್ಯದರ್ಶಿ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್.ಪಾಟೀಲ, ಶ್ರೀಮತಿ ಎಲ್.ಎಂ.ಬಿರಾದಾರ, ಶ್ರೀಮತಿ ಎನ್.ಎಸ್.ಗಡಗಿ, ಹಾಗೂ ಮೊದಲಾದವರು ಉಪಸ್ಥಿತರಿದ್ದರು.





























