
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೭: ಕಳೆದು ಎರಡು ವರ್ಷಗಳಿಂದ ಉತ್ತಮ ಇಳುವರಿಯಿಂದ ಒಳ್ಳೆಯ ದರ ಪಡೆದುಕೊಳ್ಳುತ್ತಿರುವ ಒಣದ್ರಾಕ್ಷಿ ಈಗ ವಿದೇಶಗಳಿಂದ ಭಾರತಕ್ಕೆ ಮತ್ತೆ ಒಣದ್ರಾಕ್ಷಿ ಆಮದು ಆಗುವ ವದಂತಿಯಿAದ ದರ ಕಡಿಮೆಯಾಗುವ ಆತಂಕ ಎದುರಾಗಿದೆ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ವತಿಯಿಂದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ರೈತರ ಸಂಕಷ್ಟದ ಕುರಿತು ವಿವರಿಸಿದರು.
ತಾಲ್ಲೂಕಿನ ದಾಕ್ಷಿ ಬೆಳೆಗಾರರು ಕಳೆದೆರಡು ವರ್ಷಗಳಿಂದ ಆಮದಾಗುತ್ತಿದ್ದ ಒಣದ್ರಾಕ್ಷಿಯನ್ನು ನಿಲ್ಲಿಸಿದ್ದರಿಂದ ದ್ರಾಕ್ಷಿಬೆಳೆಗೆ ಒಳ್ಳೆಯ ದರ ಬಂದು ರೈತರು ಸಾಲ ಮುಕ್ತರಾಗುತ್ತಿರುವಾಗ ಪ್ರಸ್ತುತ ವರ್ಷ ಮತ್ತೆ ಆಮದು ಆಗುವುದೆಂಬ ಸುದ್ದಿ ಹಬ್ಬಿದೆ. ಬೆಲೆಯನ್ನು ದಿನೇ ದಿನೇ ಕಡಿಮೆ ಮಾಡುತ್ತಿರುವರುದರಿಂದ ಮತ್ತೆ ರೈತರು ಆತಂಕಕ್ಕಿಡಾಗುವAತಾಗಿದೆ. ಆದ್ದರಿಂದ ಸಂಸದರು ಸಂಬAಧಿಸಿದ ಅಧಿಕಾಗಳಿಗೆ ಆಮದಾಗುತ್ತಿರುವ ಒಣದ್ರಾಕ್ಷಿಯನ್ನು ತಡೆಗಟ್ಟಲು ಕ್ರಮ ಕೈಗೊಂಡು ದ್ರಾಕ್ಷಿ ಬೆಳೆಗಾರರಿಗೆ ಬರುವ ಸಂಕಷ್ಟವನ್ನು ದೂರ ಮಾಡಬೇಕೆಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ದ್ರಾಕ್ಷಿ ಬೆಳೆಗಾರರಾದ ಮಂಜು ಬಿರಾದಾರ, ಸಂತೋಷ ಕಾಮಗೊಂಡ, ಬಾಪುರಾಯ ಮಸಳಿ, ಕುಮಾರ ಗೊಳಸಂಗಿ, ಮಹಾಂತೇಶ ಬಿರಾದಾರ, ಪಾಂಡುರAಗ ಸೊರಡಿ, ಮಲ್ಲು ಸುತಗುಂಡಿ, ಸಂತೋಷ ಜಮಖಂಡಿ, ಸಂತೋಷ ಹೊನವಾಡ, ಮಲ್ಲುಕಾರ್ಜುನ ತುಳಜಾನ, ಹಣಮೇಶ ಬಾಳಿಗೇರಿ, ವಿನಾಯಕ ಹೊನವಾಡ ಇದ್ದರು.




























