Home ಜಿಲ್ಲೆ ಹೆಣ್ಣು ಅಬಲೆ ಅಲ್ಲ ಸಬಲೆ

ಹೆಣ್ಣು ಅಬಲೆ ಅಲ್ಲ ಸಬಲೆ

ಚನ್ನಮ್ಮನ ಕಿತ್ತೂರು,ಮಾ10: ಪ್ರತಿ ಕ್ಷೇತ್ರದಲ್ಲಿ ಹೆಣ್ಣು ಅಬಲೆ ಅಲ್ಲ ಸಬಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಬೀತುಪಡುತ್ತಿದೆ. ಇಂತಹ ಪುಣ್ಯ ದಿನದಂದು ಶ್ರೀ ಹುಲಿಗೆಮ್ಮ ದೇವಿಯ ಆಗಮನದಿಂದ ವಿಶ್ವ ಮಹಿಳಾ ದಿನಾಚರಣೆಯ ಆಚರಣೆಗೆ ವಿಶೇಷ ಮೆರುಗು ಬಂದಿದೆ ಎಂದು ಕನ್ನಡ ಉಪನ್ಯಾಸಕಿ ಡಾ. ಅನ್ನಪೂರ್ಣ ಪಾಟೀಲ ತಿಳಿಸಿದರು.


ಸಮೀಪದ ಹೊಸಲಿಂಗನಮಠ ಗ್ರಾಮದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಗ್ರಾಮೀಣ ಭಾಗದಲ್ಲಿ ಮೊದಲು ಹೆಣ್ಣು ಮಗುವಿನ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಆದ್ಯತೆಯನ್ನು ಪಾಲಕರು ಪ್ರತಿಯೊಬ್ಬರು ಸೂಕ್ಷ್ಮವಾಗಿ ಗಮನಿಸಿ ತಮ್ಮ ಮನೆಯಲ್ಲಿರುವ ಹೆಣ್ಣು ಮಗುವಿಗೆ ಮೊದಲನೇ ಆದ್ಯತೆಯಾಗಿ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಮಿಕ ಸಂಘಟನೆ ಅಧ್ಯಕ್ಷ ಶಿವಾ ಭಾಗವಾಡ್ಕರ ಲಿಂಗನಮಠ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ತಾಯಿ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನ ಹೊಸದಾಗಿ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದರ ಜೊತೆಗೆ ಅನ್ನ ಪ್ರಸಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ. ಕಾರ್ಮಿಕರ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಮೊದಲನೆಯದಾಗಿ ಮಹಿಳಾ ಕಾರ್ಮಿಕರನ್ನು ಹುಡುಕಿ ಅವರ ಕಾರ್ಮಿಕ ಕಾರ್ಡ್ ಮಾಡುವುದರ ಜೊತೆಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದ್ದು ನನಗೆ ತೃಪ್ತಿ ನೀಡಿದೆ ಎಂದರು.


ಶಿಕ್ಷಕ ಬಸವರಾಜ ತಳವಾರ ಅವರು ಮಾತನಾಡಿ ಹೆಣ್ಣು ತಮ್ಮ ಜೀವನದುದ್ದಕ್ಕೂ ತ್ಯಾಗಮಯಿ ಆಗಿದ್ದಾಳೆ. ಏಕೆಂದರೆ ಹೆಣ್ಣು ತನ್ನ ಜೀವನದಲ್ಲಿ ಮಗಳಾಗಿ ಹುಟ್ಟಿ, ಸೊಸೆಯಾಗಿ, ತಾಯಿಯಾಗಿ ನಂತರ ಅಜ್ಜಿಯಾಗಿ ಜೀವನದುದ್ದಕ್ಕೂ ಎಲ್ಲವನ್ನು ತನ್ನಷ್ಟಕ್ಕೆ ತಾನೇ ಸಹಿಸಿಕೊಂಡು ಬದುಕುತ್ತಾಳೆ ಎಂದರೆ ಹೆಣ್ಣಿಗೆ ನಾವು ಎಷ್ಟು ಪೂಜಿಸಿದರು ಸಾಲದು ಎಂದರು.


ಕಾರ್ಯಕ್ರಮದಲ್ಲಿ ಸಾನಿಧ್ಯ ಬಸಯ್ಯ ಹಿರೇಮಠ, ಅಧ್ಯಕ್ಷತೆ ಮಾತೆ ರತ್ನವ್ವ ಹುಲಗನ್ನವರ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ದೀಪಾ ಪಾಟೀಲ, ಅಕರಾರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರೆ, ಮಂಜುಳಾ ಕಡಕೋಳ, ಲಕ್ಷ್ಮೀ, ಶೀಲಾ ಗಂಗಾಧರಮಠ, ವೈದ್ಯಾಧಿಕಾರಿ ಪುನಂ ಕಡಕೋಳ, ಸುವರ್ಣಾ ಕುಠಾಳೆ, ಸುರೇಖಾ ತಳವಾರ, ರೇಖಾ ಮಿಟಗಾರ, ಅಮೀನಾಬಿ ಹಟ್ಟಿಹೊಳಿ, ಶೋಭಾ ಬೆಳಗಾವಿ ಇತರರಿದ್ದರು. ಶಿಕ್ಷಕ ಪುಂಡಲಿಕ ಸನ್ನಾರ ನಿರೂಪಿಸಿದರು, ಪಾಂಡುರಂಗ ಮಿಟಗಾರ. ಸ್ವಾಗತಿಸಿದರು, ಶೋಭಾ ಬೆಳಗಾವಿ ವಂದಿಸಿದರು.