Home ಜಿಲ್ಲೆ ಕಲಬುರಗಿ ಜನಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮ

ಜನಮನ ಸೆಳೆದ ಸಾಂಸ್ಕøತಿಕ ಕಾರ್ಯಕ್ರಮ

ಕಲಬುರಗಿ,ಮೇ 2 : ಸಾವಿರಾರು ವರ್ಷಗಳಿಂದ ಉಳಿದು ಬೆಳೆದು ಬಂದಿರುವ ಜಾನಪದ ವಾಗ್ಮಯದಿಂದ ಹಿರಿಮಯವಾಗಿದೆ. ತತ್ಪಪದ ಅನುಭವದಿಂದ ಈ ಜನರ ಮಾತುಗಳೆಲ್ಲ ತತ್ವಪದವಾಗಿದೆ ಎಂದು ಸಿದ್ರಾಮಪ್ಪ ಆಲಗೂಡಕರ್ ನುಡಿದರು. ಕಲಬುರಗಿ ನಗರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಅಳಂದ ತಾಲೂಕಿನ ಶ್ರೀ ಶಾಂತಲಿಂಗೇಶ್ವರ ವೀರಗಾಸೆ ಪುರವಂತಿ ಜಾನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಾನಪದ ಸಂಗೀತೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಲ್ಲ್ಲಿ ಅಧ್ಯಕ್ಷತೆಯನ್ನು ಶರಣಗೌಡ ಪಾಟೀಲ-ನಿಂಬರ್ಗಾ, ಉದ್ಘಾಟಕರಾಗಿ ಬಸವರಾಜ ಬೆಣೆಶಿರೂರ, ಮುಖ್ಯ ಅತಿಥಿಯಾಗಿ ಪರಮೇಶ್ವರ ಹಳ್ಳಿಜೊಳದ, ಸಿದ್ಧಲಿಂಗಪ್ಪ ಧುಲಗೆ, ಬಂಡೆಪ್ಪ ಪಾಂಚಾಳ,ಬಸರವರಾಜ ಭೂಸನೂರ, ಈರಣ್ಣ ತಡಕಲ್,ಮಾಳಪ್ಪ ಹಿರೇಪೂಜಾರಿ, ವೀರಸಂಗಪ್ಪ ಬುಳ್ಳಾ, ಬಸವರಾಜ ಮಾಡ್ಯಾಳ, ಕಲ್ಯಾಣರಾವ ಕಾಡಪ್ಪಗೋಳ, ಮಲ್ಲಿಕಾರ್ಜುನ ಕೂಲಾಲಿ, ಮುಂತಾದವರು ಉಪಸ್ಥಿತರಿದ್ದರು. ಕಾಯಾಕ್ರಮದಲ್ಲಿ ಕಥಾ-ಕೀರ್ತನೆ- ಸೂರ್ಯಕಾಂತ ಶಾಸ್ತ್ರ್ತ್ರಿ, ಸುಗಮ ಸಂಗೀತ- ಕಲ್ಲಿನಾಥ ಹಿರೇಮಠ, ವಚನ ಗಾಯನ-ಪವಿತ್ರಾ ರಾಜನಾಳ, ಹಿಂದುಸ್ತಾನಿ ಗಾಯನ- ಶಿವಶರಣಯ್ಯ ನಿಂಗದಳ್ಳಿ, ಮೀರಾ ಭಜನ- ತೋಟಯ್ಯ ಶಾಸ್ತ್ರೀ, ಜಾನಪದ ಗೀತೆ- ಇಸ್ಲಾಮಸಾಬ, ದಾಸವಾಣಿ- ಶಿವಶರಣಯ್ಯ ಡಿ. ಮಠ, ಭಕ್ತಿ ಗೀತೆ- ಶಿವಪುತ್ರಪ್ಪ ಜೋಗೂರ, ಕಾಂಚನಾ ಎಸ್. ಸಂಗೋಳಗಿ, ಜಾನಪದ ಗೀತೆ-ಸುಧಾಕರ ಬಿ. ಸಂಗೋಳಗಿ ನಡೆಸಿಕೊಟ್ಟರು. ಇವರಿಗೆ ಹಾರ್ಮೋನಿಯಂ – ಚೇತನ ಬೀದಿಮನಿ, ತಬಲಾ ರವಿಸ್ವಾಮಿ ಗೋಟೂರ, ಶಿವಾನಂದ ಹಿತ್ತಲಶಿರೂರ ಅವರು ಸಾಥ್ ನೀಡಿದರು ಎಂದು
ಸಂಘದ ಕಾರ್ಯದರ್ಶಿ ರೇವಣಯ್ಯ ಸ್ವಾಮಿ ಸುಂಟನೂರ ತಿಳಿಸಿದ್ದಾರೆ.