Home ಜಿಲ್ಲೆ ಕಲಬುರಗಿ ಎನ್‍ಎಸ್‍ಎಸ್ ಶಿಬಿರದಲ್ಲಿ ಸುಕಿ ತಂಡದಿಂದ ಸಂಗೀತ ಸಂಭ್ರಮ

ಎನ್‍ಎಸ್‍ಎಸ್ ಶಿಬಿರದಲ್ಲಿ ಸುಕಿ ತಂಡದಿಂದ ಸಂಗೀತ ಸಂಭ್ರಮ

ಕಲಬುರಗಿ,ನ.7: ಜಿಲ್ಲೆಯ ಅಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕದಿಂದ ವಾರ್ಷಿಕ ವಿಶೇಷ ಶಿಬಿರವು ಕಳೆದ ಆರು ದಿನಗಳಿಂದ ಗ್ರಾಮದ ಧರ್ಮರಾಯನ ಗುಡಿ ಆವರಣದಲ್ಲಿ ಮತ್ತು ಊರಿನ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿ ಕೊಂಡು ನಿತ್ಯವು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳೊಂದಿಗೆ ಸ್ವಚ್ಛತೆಯ ಅರಿವು ರಾಷ್ಟ್ರೀಯ ಭಕ್ತಿ ಸೇವಾ ಮನೋಭಾವನೆ ಈ ಎಲ್ಲ ಅಂಶಗಳನ್ನು ಒಳಗೊಂಡ ವಿಶೇಷ ಇದಾಗುತ್ತಿದೆ. ಶ್ರಮದಾನ ನಂತರ ಭೋಜನವನ್ನು ಮುಗಿಸಿಕೊಂಡು ವಿದ್ಯಾರ್ಥಿಗಳಿಗೆ ವವಿಷಯಗಳ ಪರಿಣಿತರನ್ನು ಕರೆಸಿ , ವಿದ್ಯಾರ್ಥಿಗಳಿಗೆ ಆಯ ವಿಷಯಗಳ ಅರಿವನ್ನು ಮೂಡಿಸುವ ಕಾರ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಮನರಂಜನೆಯನ್ನು ನೀಡುವ ಸಲುವಾಗಿ ನಗರದ ಪ್ರಸಿದ್ಧ ಸುಕಿ ಸುಮಧುರ ತಂಡದಿಂದ ವಿಶೇಷ ಮನಸಿನ ಆಯೋಜಿಸಲಾಯಿತು.ಕಾಲೇಜಿನ ರಾಜಕೀಯ ಶಾಸ್ತ್ರದ ಉಪನ್ಯಾಸಕ ಲಕಪತಿರಾಜ್ ಬಡದಾಳ ಅವರು ಸಂವಿಧಾನದ ಮಹತ್ವವನ್ನು ಸರಳ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಹೇಳಿದರು.
ನಂತರ ಸುಕಿ ಸಾಂಸ್ಕøತಿಕ ತಂಡ ತನ್ನ ಸದಸ್ಯರೊಂದಿಗೆ ವಿದ್ಯಾರ್ಥಿಗಳಿಗೆ ಮನರಂಜನೆಯ ರಸದೂಟವನ್ನು ನೀಡಿದರು ಈ ಸಂದರ್ಭದಲ್ಲಿ ತಂಡದ ಗಾಯಕ ಕಿರಣ್ ಪಾಟೀಲ್ ಅವರು ವಿಜಯಪುರದ ಸಿದ್ದೇಶ್ವರ ಶ್ರೀಗಳ ಕುರಿತು ಮೈಸೂರಿನ ಕೆಸಿ ಶಿವಪ್ಪ ಅವರು ರಚನೆಯ ಮುದ್ದುರಾಮ ಹಾಡನ್ನು ಭಕ್ತಿ ಪೂರ್ವಕವಾಗಿ ಭಾವನೆಗಳ ಮನಸ್ಸು ಅರಳುವ ರೀತಿಯಲ್ಲಿ ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದರು. ನಂತರ ಕಾಲೇಜಿನ ಪ್ರಾಚಾರ್ಯ ಡಾ. ಭೀಮರಾವ್ ಅರಿಕೇರಿ ಅವರು ಭಾವಗೀತೆ ಜನಪದ ಗೀತೆ ಹಾಗೂ ಚಿತ್ರಗೀತೆಗಳನ್ನು ಸಹ ಹಾಡಿದರು ನಂತರ ತಂಡದ ಇನ್ನೊಬ್ಬ ಗಾಯಕಿ ನರೋಣ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ವೇತಾ ಗುಳೇದಗುಡ್ ಅವರು ಎಸ್ ಜಾನಕಿ ಅವರು ಹಾಡಿರುವ ಕೆಲವು ಹಾಡುಗಳನ್ನು ಹಾಡಿದರು. ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಹಾಡು ಹಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಗಣಿತ ಶಾಸ್ತ್ರದ ಉಪನ್ಯಾಸಕ ಮಲ್ಲಿನಾಥ್ ನಾಟಿಕರ್ ಅವರು ವಹಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಸಿಬ್ಬಂದಿಗಳಾದ ಸಿದ್ದರಾಮ ಸನಗುಂದಿ ವೆಂಕಟೇಶ್ ತೇಜಸ್ವಿನಿ ಪಾಟೀಲ್ ಶಿವಮ್ಮ ಮುಂತಾದವರು ಉಪಸ್ಥಿತರಿದ್ದರು.