
ಕಲಬುರಗಿ: ದರ್ಗಾ ಹಜರತ್ ಖ್ವಾಜಾ ಬಂದೇ ನವಾಜ್ ಅವರ ಸಜ್ಜಾದಾ ನಶೀನ್ ಹಾಗೂ ಖ್ವಾಜಾ ಎಜುಕೇಶನ್ ಸೊಸೈಟಿಯ ಅಧ್ಯಕ್ಷ, ಕೆಬಿಎನ್ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ, ಕೆಬಿಎನಯು ವಿವಿಯ ಕುಲಾಧಿಪತಿಯಾರದ ಡಾ. ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರು, ತಮ್ಮ ಪೂಜ್ಯ ತಂದೆ ದಿವಂಗತ ಹಜರತ್ ಡಾ. ಸೈಯದ್ ಶಾ ಗೆಸು ದರಾಜ್ ಖುಸ್ರೋ ಹುಸೇನಿ (ರಹ.) ಅವರ ಕ್ರೀಡಾ ಕ್ಷೇತ್ರದ ಸೇವೆ ಹಾಗೂ ದೂರದೃಷ್ಟಿಗೆ ಗೌರವ ಸಲ್ಲಿಸಿದರು. ಕೆಬಿಎನ್ ಹೌಸ್ ಆಫ್ ಸ್ಪೋಟ್ರ್ಸ್ ಅಡಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳಿಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವುದು ತಮ್ಮ ತಂದೆಯ ಪರಿಶ್ರಮ ಮತ್ತು ದೂರದೃಷ್ಟಿಯ ಫಲ ಎಂದು ಅವರು ಹೇಳಿದರು.
ಕೆಬಿಎನ್ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಮೆಂಟ್ನ ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 2012ರಲ್ಲಿ ತಮ್ಮ ತಂದೆಯವರ ಆಶಯದಂತೆ ಈ ಟೂರ್ನಮೆಂಟ್ ಆರಂಭವಾಯಿತು. ವಿವಿಧ ರಾಜ್ಯಗಳ ಯುವ ಆಟಗಾರರು, ತಂಡಗಳು ಮತ್ತು ಫುಟ್ಬಾಲ್ ಅಕಾಡೆಮಿಗಳಿಗೆ ಪರಸ್ಪರ ಸ್ಪರ್ಧಿಸುವ ಹಾಗೂ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಸಂಸ್ಥಾಪಕ ಕುಲಪತಿಗಳ ಮಾರ್ಗದರ್ಶನದಲ್ಲಿ ಹಲವು ವರ್ಷಗಳ ಪರಿಶ್ರಮ ಮತ್ತು ಯೋಜನೆಯ ಫಲವಾಗಿ ಈ ಕ್ರೀಡಾಕೂಟ ರಾಷ್ಟ್ರೀಯ ಮಟ್ಟದ ಸ್ಥಾನಮಾನ ಗಳಿಸಿದೆ. ಫುಟ್ಬಾಲ್, ಕ್ರಿಕೆಟ್ ಮತ್ತು ಹಾಕಿ ಸಂಸ್ಥೆಗಳೂ ಈ ಟೂರ್ನಮೆಂಟ್ಗೆ ರಾಷ್ಟ್ರೀಯ ಮಟ್ಟದ ಮನ್ನಣೆ ನೀಡುತ್ತಿವೆ ಎಂದು ತಿಳಿಸಿದರು.
ಕ್ರೀಡೆಯ ಮಹತ್ವವನ್ನು ವಿವರಿಸಿದ ಅವರು, ಕ್ರೀಡೆ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವುದರ ಜೊತೆಗೆ ಆತ್ಮವಿಶ್ವಾಸ, ಪರಿಶ್ರಮ, ಶಿಸ್ತು ಮತ್ತು ಸಾಧನೆಯ ಹಂಬಲವನ್ನು ಬೆಳೆಸುತ್ತದೆ ಎಂದರು. ಶಾಲಾ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರೂ ಫುಟ್ಬಾಲ್, ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದಾಗಿ ಸ್ಮರಿಸಿದರು. ಕ್ರೀಡಾಂಗಣಕ್ಕೆ ಪ್ರವೇಶಿಸಿದಾಗ ತಮ್ಮ ಎಲ್ಲ ಅಧಿಕೃತ ಹುದ್ದೆಗಳನ್ನು ಬದಿಗಿಟ್ಟು ಒಬ್ಬ ಕ್ರೀಡಾಪಟುವಾಗಿ ವರ್ತಿಸುವುದಾಗಿ ಹೇಳಿದರು.
ಕ್ರೀಡಾಸ್ಫೂರ್ತಿಯ ಕುರಿತು ಮಾತನಾಡಿದ ಅವರು, ಗೆಲ್ಲುವ ಉತ್ಸಾಹದ ಜೊತೆಗೆ ಎದುರಾಳಿ ತಂಡದ ಆಟಗಾರರನ್ನು ಗೌರವಿಸುವುದು ಅತ್ಯಗತ್ಯ. ಉತ್ತಮ ಪ್ರದರ್ಶನ ನೀಡಿದ ಆಟಗಾರರ ಸಾಮಥ್ರ್ಯವನ್ನು ಗುರುತಿಸಿ ಅವರಿಂದ ಕಲಿಯಬೇಕು. ಪ್ರತಿಯೊಂದು ಗೋಲು ಗಳಿಸುವಿಕೆ ಮತ್ತು ಗೋಲು ತಡೆಯುವಿಕೆ ಹೊಸ ಅನುಭವ ನೀಡುತ್ತದೆ ಎಂದರು.
ಫೈನಲ್ನಲ್ಲಿ ಗೆದ್ದ ಬೆಂಗಳೂರು ಮಾತೃ ಪ್ರತಿಷ್ಠಾನ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಅವರು, ರನ್ನರ್ ಅಪ್ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್, ಗೋವಾ ತಂಡದ ಪ್ರದರ್ಶನವನ್ನೂ ಶ್ಲಾಘಿಸಿದರು. ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎ. ಹ್ಯಾರಿಸ್, ಕಾರ್ಯದರ್ಶಿ, ಪಂದ್ಯಗಳ ರೆಫರಿಗಳು, ಅಧಿಕಾರಿಗಳು, ತರಬೇತುದಾರರು ಮತ್ತು ತಂಡಗಳ ವ್ಯವಸ್ಥಾಪಕರಿಗೆ ಕೃತಜ್ಞತೆ ಸಲ್ಲಿಸಿದರು. ವಯೋಮಿತಿ ಸೇರಿದಂತೆ ಕ್ರೀಡಾ ನಿಯಮಗಳನ್ನು ಎಲ್ಲ ತಂಡಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಖಾಜಾ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಪೆÇ್ರ. ಎ.ಎಂ. ಪಠಾಣ್ ಮಾತನಾಡಿ, ದಿವಂಗತ ಸಜ್ಜಾದಾ ನಶೀನ್ ಅವರ ಕ್ರೀಡಾ ಕ್ಷೇತ್ರದ ದೂರದೃಷ್ಟಿಯನ್ನು ಸ್ಮರಿಸಿದರು. ಕೆಬಿಎನ್ ವಿಶ್ವವಿದ್ಯಾಲಯದ ಪೆÇ್ರ-ವೈಸ್ ಚಾನ್ಸಲರ್ ಪೆÇ್ರ. ಅಶ್ಫಾಕ್ ಅಹ್ಮದ್ ಸ್ವಾಗತಿಸಿದರು. ಕುಲಸಚಿವ ಮೀರ ವಿಲಾಯತ ಅಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹಜರತ್ ಕ್ಯಾಂಪಸ್ ನಿರ್ದೇಶಕ ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ, ಕೆ ಈ ಎ ಸ್ ಸಾಮಾನ್ಯ ಕಾರ್ಯದರ್ಶಿ ಬೆನ್ನಿ ಕೊರಿಯಾಕೋಸ್, ಡಾ. ಫಿರೋಜ್, ಐ ಕ್ಯೂ ಎ ಸಿ ನಿರ್ದೇಶಕ ಡಾ. ಅಬ್ದುಲ್ ಬಶೀರ್, ಹಬೀಬ್ ಮೌಜಂ , ಸೈಯದ್ ಮಜರ್ ಹುಸೇನ್, ಮೌಲ್ವಿ ಅಬ್ದುಲ್ ವಾಹಿದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





















