Home ಜಿಲ್ಲೆ ಕಲಬುರಗಿ ಪುಸ್ತಕ ಓದುವ ಸಂಸ್ಕøತಿ ಹೆಚ್ಚಲಿ: ಪ್ರೊ.ಪೋತೆ

ಪುಸ್ತಕ ಓದುವ ಸಂಸ್ಕøತಿ ಹೆಚ್ಚಲಿ: ಪ್ರೊ.ಪೋತೆ

ಕಲಬುರಗಿ,ನ.9-ಪುಸ್ತಕ ಓದುಗರು ಕಡಿಮೆ ಆಗುತ್ತಿದ್ದಾರೆ. ಹಾಗಾಗಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಾಗಲಿ ಎಂದು ನಾಡಿನ ಹಿರಿಯ ಸಾಹಿತಿ ಪೆÇ್ರ.ಎಚ್.ಟಿ.ಪೆÇೀತೆ ಹೇಳಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದ ಡಾ.ಭಾಗ್ಯಜ್ಯೋತಿ ಅವರು ರಚಿಸಿದ “ಶರಣರ ಹಾಗೂ ಸಂತರ ಸಂಕ್ಷಿಪ್ತ ಜೀವನ ಕಥನ”ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವಚನ ಸಾಹಿತ್ಯ, ತತ್ವಪದ, ಕನ್ನಡ ಸಾಹಿತ್ಯ, ಸೂಫಿ ಸಾಹಿತ್ಯ ಹೀಗೆ ಮುಂತಾದ ಸಾಹಿತ್ಯ ಹುಟ್ಟಿದ್ದು ಕಲ್ಯಾಣ ಕರ್ನಾಟಕದಲ್ಲಿ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು, ಅಧ್ಯಾಪಕರು ಅಧ್ಯಯನಶೀಲರಾಗಬೇಕು, ಚಿಂತನಾಶಿಲರಾಗಬೇಕು, ಸಂಶೋಧನಾಶೀಲರಾಗಬೇಕು ಎಂದು ಹೇಳಿದರು.
ಪುಸ್ತಕ ಪರಿಚಯ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್.ನಿರಗುಡಿ ಅವರು, ಪುಸ್ತಕ ನೋಡಲು ಅಂದವಾಗಿದೆ ಹಾಗೂ ಸರಳವಾದ ಭಾಷೆಯಲ್ಲಿ ಶರಣರ ಸಂತರ ಜಯಂತಿಗಳು, 33 ಮಹಾನ್
ಶರಣರ ಸಂಕ್ಷಿಪ್ತ ಪರಿಚಯ ಉತ್ತಮರೀತಿಯಲ್ಲಿ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ನಾರಾಯಣ ರೋಲೆಕರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪೆÇ್ರ.ಪ್ರಕಾಶ ಮೋರಗೆ ಅವರು ವಹಿಸಿದ್ದರು ಡಾ.ಭಾಗ್ಯಜ್ಯೋತಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಡಾ. ರಾಮಲಿಂಗಪ್ಪ ಭೋಸಲೆ ,ಡಾ. ಪ್ರಿಯದರ್ಶಿನಿ, ಡಾ. ಜ್ಯೋತಿ ಕೆ ಎಸ್ ಇತರರು ಇದ್ದರು.
ಸಿದ್ರಾಮಪ್ಪ ಬಣಗಾರ ನಿರೂಪಿಸಿದರು.ಡಾ ಪ್ರಿಯದರ್ಶಿನಿ ವಂದಿಸಿದರು