
ಬೀದರ್,ನ.9-ಜಿಲ್ಲೆಯ ಹಿರಿಯ ಸಾಹಿತಿ, ನಿವೃತ್ತ ಉಪನ್ಯಾಸಕರಾದ ಡಾ.ಕೆ.ಎಸ್.ಬಂಧು. ಸಿದ್ದೇಶ್ವರ ಅವರು ರಚಿಸಿದ ” ಬುದ್ಧ ಬಸವ ಅಂಬೇಡ್ಕರ್ ವಿಚಾರ ಜ್ಯೋತಿ” , ” ಬುದ್ದಿಷ್ಡ ಮಕ್ಕಳ ಹೆಸರಿನ ಲೋಕ,, ” “, ಡಾ.ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ”-ಈ ಮೂರು ಪುಸ್ತಕಗಳನ್ನು ಉಸ್ತುವಾರಿ ಸಚಿವರು ಮತ್ತುಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಲೋಕಾರ್ಪಣೆ ಮಾಡಿದರು.
ನನ್ನ ವಿಧಾನ ಸಭಾ ಮತ ಕ್ಷೇತ್ರದ ಹಾಗೂ ಜಿಲ್ಲೆಯ ಹಿರಿಯ ಸಾಹಿತಿ ಡಾ.ಕೆ. ಎಸ್.ಬಂಧು ಸಿದ್ದೇಶ್ವರರು ತಮ್ಮ ವೃತ್ತಿ ಜೀವನದ ಜೊತೆಗೆ ಸಾಹಿತ್ಯ ರಚನೆಗೆ ತೊಡಗಿದ್ದು ಅವರ ಮಹತ್ವದ ಕಾರ್ಯ. ಈ ಮೂರು ಕೃತಿಗಳು ಬುದ್ಧ, ಬಸವ, ಡಾ.ಅಂಬೇಡ್ಕರ್ ಚಿಂತನೆಯ ಸನ್ಮಾರ್ಗವನ್ನು ತೋರುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಟ್ಟುವ ಚಿಂತನೆ ಈ ಕೃತಿಗಳು ಮಾಡುತ್ತಿವೆ. ಸಾಹಿತ್ಯವೇ ಸಮಾಜ ಪರಿವರ್ತನೆಯ ಪ್ರಮುಖ ಅಸ್ತ್ರವಾಗಿದೆ. ಇಂದಿನ ಸಾಹಿತಿಗಳು, ಲೇಖಕರು ಸಮಾಜ, ಸರಕಾರಕ್ಕೆ ಸರಿ ಸಂದೇಶ ಕೊಡತ್ತಿರಬೇಕು. ಇಂದು ಡಾ.ಚನ್ನಬಸವ ಪಟ್ಡದ್ದೇವರ ರಂಗಮಂದಿರದಲ್ಲಿ ಜರುಗುತ್ತಿರುವ ಬೀದರ ಜಿಲ್ಲೆಯ ಪ್ರಥಮ ದಲಿತ ಬಂಡಾಯ ಸಮ್ಮೇಳನಕ್ಕೆ ಪೂರಕವಾಗಿ ಈ ಕೃತಿಗಳು ಬಿಡುಗಡೆ ಆಗಿದ್ದು ಸಂತಸ ತಂದಿದೆ. ಬಂಧು ಅವರು ರಾಜ್ಯ ಮಟ್ಟದಲ್ಲಿಯೂ ಜಿಲ್ಲೆಯ, ಕಲ್ಯಾಣ ಕರ್ನಾಟಕದ ಕೀರ್ತಿ ಹೆಚ್ವಿಸಲಿ ಅವರ ಕೃತಿಗಳು ಸಮಾಜಕ್ಕೆ ಮಾರ್ಗದರ್ಶಿ ಅಗಲಿ ಎಂದು ಹಾರೈಸಿದರು.
ಸಮ್ಮೇಳನಾಧ್ಯಕ್ಷ ಮಾರುತಿ ಬೌದ್ಧೆ, ಮಾಜಿ ಸಚಿವ ರಹೀಂ ಖಾನ್, ಶಾಸಕ ಶೈಲೇಂದ್ರ ಬೆಲ್ದಾಳೆ, ಡಿಎಸ್ಎಸ್ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಎಸ್.ಪಿ.ಸುಳ್ಳದ, ಸುರೇಶ ಹಾದಿಮನಿ, ಎಚ್.ಶಂಕರ, ವರಜ್ಯೋತಿ ಭಂತೇಜಿ, ಸಂಘಾನಂದ ಭಂತೇಜಿ ಇತರರು ಉಪಸ್ಥಿಯರಿದ್ದರು. ಮೊದಲಿಗೆ ಎಮ್.ಎಸ್.ಮನೋಹರ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ.ಶಿವಶಂಕರ ಟೋಕರೆ ಮಾಡಿದರೆ, ಸಚೀನ ಮಠಪತಿ ವಂದಿಸಿದರು.





















