
ಲಕ್ಷೆ÷್ಮÃಶ್ವರ,ನ೭“ಮಕ್ಕಳ ಪ್ರತಿಭೆ ಪ್ರಕಾಶಿಸಲು ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ. ಪ್ರತಿಭೆ ಎನ್ನುವುದು ಕೇವಲ ಪಠ್ಯಕ್ಕೆ ಸೀಮಿತವಾಗಿರುವುದಿಲ್ಲ. ಪಠ್ಯೇತರ ಚಟುವಟಿಕೆಗಳು ಕೂಡ ಪ್ರತಿಭೆಯ ಇನ್ನೊಂದು ಮುಖ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಇಲಾಖೆ ಸಮಾನ ಆದ್ಯತೆ ನೀಡುತ್ತಿದೆ” ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಜ ಶೀಮಿಕೇರಿ ಅಭಿಪ್ರಾಯಪಟ್ಟರು.
ಅವರು ಲಕ್ಷೆ÷್ಮÃಶ್ವರದ ಬಿಸಿಎನ್ ಸ್ಪೆಕ್ಟçಂ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಲಕ್ಷೆ÷್ಮÃಶ್ವರ ದಕ್ಷಿಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಬಿಸಿಎನ್ ಸ್ಪೆಕ್ಟçಂ ಶಾಲೆಯ ಆಡಳಿತಾಧಿಕಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳಿಗೆ ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತಮ ಅವಕಾಶ ಹಾಗೂ ಗುರುತಿಸುವಿಕೆ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಕೆ ಹವಾಲ್ದಾರ ಮಾತನಾಡಿ, ನಾಡಿನ ಸಾಂಸ್ಕöÈತಿಕ ಪರಂಪರೆಯನ್ನು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೆ ದಾಟಿಸುವ ಮಹಾನ್ ಉದ್ದೇಶ ದಿಂದ `ಪ್ರತಿಭಾ ಕಾರಂಜಿ’ ಕಾರ್ಯಕ್ರಮ ಅನುಷ್ಠಾನಗೊಳಿಸಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಪ್ರತಿಭೆ, ಕಲೆ ಸಂಸ್ಕöÈತಿ ಮತ್ತು ಪರಂಪರೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ಹೇಳಿದರು.
ಸ ಮಾ ಹೆ ಮ ಪ್ರಾ ಶಾಲೆ ಲಕ್ಷೆ÷್ಮÃಶ್ವರ ಶಾಲೆಯ ಪ್ರಧಾನ ಗುರುಗಳಾದ ಬಸವರಾಜ ಎಮ್ ಕುಂಬಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ ಕೆ ಹವಾಲ್ದಾರ, ಲಕ್ಷೆ÷್ಮÃಶ್ವರ ಘಟಕದ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಮ್ ಎನ್ ಭರಮಗೌಡರ, ಶಿಕ್ಷಣ ಸಂಯೋಜಕರಾದ ಆರ್ ಬಿ ಜೋಶಿ, ಬಿ ಆರ್ ಪಿ ಬಿ ಎಮ್ ಯರಗುಪ್ಪಿ, ಶಾಲಾ ಮುಖ್ಯ ಶಿಕ್ಷಕರಾದ ಹೇಮಾ ಎಸ್ ಕೆ, ಪ್ರಧಾನ ಗುರುಗಳಾದ ಬಸವರಾಜ ಎಮ್ ಕುಂಬಾರ, ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಎಸ್ ಸಿ ಹಿರೇಮಠ, ಖಜಾಂಚಿ ಗೀತಾ ಹಳ್ಯಾಳ,ಪದಾಧಿಕಾರಿಗಳಾದ ಮುತ್ತಣ್ಣ ಹುಬ್ಬಳ್ಳಿ, ಎಸ್ ವಿ ಸೋಗಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷರಾದ ಪಿ ಸಿ ಕಾಳಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಉಮಚಗಿ,ಪ್ರಭುಗೌಡ ಯಕ್ಕಿಕೊಪ್ಪ, ಸತೀಶ್ ಬೊಮಲೆ, ಎನ್ ಎಸ್ ಬಂಕಾಪುರ, ಜೆ ವಿ ಅರಳಿಕಟ್ಟಿ, ಎಸ್ ಎನ್ ಕ್ಷತ್ರಿಯ, ಜಯಶ್ರೀ ಹಬೀಬ, ಜಿ ಎಚ್ ಮಾಣಿಕ, ಎ ಬಿ ನಿಂಗಮ್ಮನವರ, ಎಸ್ ಎ ಸುರಹೊನ್ನೆ, ಎಫ್ ಐ ನೀರಲಗಿ ಹಾಗೂ ಕ್ಲಸ್ಟರಿನ ಮುದ್ದು ಮಕ್ಕಳು ಹಾಜರಿದ್ದರು.
ಸಿ ಆರ್ ಪಿ ಶ್ರೀನಿವಾಸ ಮತ್ತೂರ, ಎಚ್ ಡಿ ನಿಂಗರಡ್ಡಿ ಎನ್ ಎನ್ ಶಿಗ್ಲಿ ನಿರ್ವಹಿಸಿದರು.




















