
ಕಲಬುರಗಿ, ನ.7: ನಗರದ ರಾಮಮಂದಿರ ವೃತ್ತದಲ್ಲಿ ರೈತ ಸಂಘಟನೆಯ ಒಕ್ಕೂಟದಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ರೈತರ ನ್ಯಾಯಯುತ ಬೇಡಿಕೆಗಳಿಗೆ ಬೆಂಬಲಿಸಿ ವಿವಿಧ ಮಠಾಧೀಶರು ಹಾಗೂ ಹಿರಿಯ ಮುಖಂಡರು ಹೋರಾಟದ ಅಖಾಡಕ್ಕಿಳಿದಿರುವುದರಿಂದ ಪ್ರತಿಭಟನೆ ಮತ್ತಷ್ಟು ಕಾವು ಪಡೆದುಕೊಂಡಿದೆ.
À 7ನೇ ದಿನದ ಧರಣಿಯಲ್ಲಿ ಪೂಜ್ಯ ಪಾಳಾ ಶ್ರೀಗಳು ಹಾಗೂ ಪೂಜ್ಯ ಸರಡಗಿ ಶ್ರೀಗಳು ನೇರವಾಗಿ ಪಾಲ್ಗೊಂಡು ಧರಣಿ ನಿರತ ರೈತರಿಗೆ ಆಶೀರ್ವಾದ ಮತ್ತು ಬೆಂಬಲ ಸೂಚಿಸಿದರು. ಅವರೊಂದಿಗೆ ಮುಖಂಡರಾದ ಎಂ.ಎಸ್. ಪಾಟೀಲ ನರಿಬೋಳ, ಸಿದ್ದು ಹಿರೇಮಠ, ಮಹಾಂತಗೌಡ ನಂದಿಹಾಳ ಹಾಗೂ ಕರೆಪ್ಪಾ .ಬಸವರಾಜ ಕೋರಿ ಮಂಜುಳಾ ಬಜಂತ್ರಿ ಮಾದೇವಿ ಬಜಂತ್ರಿ ಚಂದ್ರು ಕೋಳಕೂರ ಅಣವಿರಗೌಡ ಬಿರಾದಾರ ಕರೆಪ್ಪಾ ಶರಣು ಪರತಾಬಾದಸೇರಿದಂತೆ ಅನೇಕ ರೈತ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಹಾಗೂ ಮುಖಂಡರು, ಅನ್ನದಾತ ರೈತನಿಗೆ ಬೆಲೆ ಸಿಗುವವರೆಗೆ ಮತ್ತು ಸರ್ಕಾರ ತನ್ನ ಮಲತಾಯಿ ಧೋರಣೆಯನ್ನು ಬಿಡುವವರೆಗೆ ಈ ಹೋರಾಟದಿಂದ ವಿಶ್ರಮಿಸುವುದಿಲ್ಲ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು




















