
ಕಲಬುರಗಿ, ನ.7 : ಪ್ರಸ್ತುತ 2026 27ನೇ ಸಾಲಿನ ಕಲ್ಬುರ್ಗಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಪೂರ್ಣ ಜ್ಞಾನ ಶಾಲೆಯ ಮಕ್ಕಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪೂರ್ಣ ಜ್ಞಾನ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿತ್, ಚಿನ್ಮಯ್ , ಪೃಥ್ವಿರಾಜ್, ಶರಣ್ ಕುಮಾರ್ ಮತ್ತು ಶಂಕರ್ ಇವರ ತಂಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
17 ವರ್ಷದ ಒಳಗಿನ 5 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ 10 ತರಗತಿಯ ವಿದ್ಯಾರ್ಥಿ ಕುಶಾಲ್ ಬಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಟ್ರಿಪಲ್ ಜಂಪನಲ್ಲಿ 9 ನೇ ತರಗತಿಯ ವಿದ್ಯಾರ್ಥಿ ಸಂಗಮೇಶ ತೃತೀಯ ಸ್ಥಾನ ಪಡೆದರೆ, 4*400 ಮೀಟರ್ ರಿಲೆನಲ್ಲಿ 9 ನೇ ತರಗತಿಯ ಭುವನೇಶ್ವರಿ ಹಾಗೂ 10 ನೇ ತರಗತಿಯ ವಿದ್ಯಾರ್ಥಿನಿ ಸಹನಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪೂರ್ಣ ಜ್ಞಾನ ಶಾಲೆಯ ಅಧ್ಯಕ್ಷ ಶರಣಪ್ಪ ಎಸ್ ಕೋಗನೂರ, ಕಾರ್ಯದರ್ಶಿ ಜಯಶ್ರೀ ಕೋಗನೂರ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರಾದ ಚಂದ್ರಲೇಖಾ ರೆಡ್ಡಿ ಇತರರು ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.




















