Home ಜಿಲ್ಲೆ ಬೆಂಗಳೂರು ಕರವೇ ಸಂಘಟನೆಯ ಉಪಾಧ್ಯಕ್ಷ ಚಲಪತಿ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ

ಕರವೇ ಸಂಘಟನೆಯ ಉಪಾಧ್ಯಕ್ಷ ಚಲಪತಿ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ

ಚಿಕ್ಕಬಳ್ಳಾಪುರ,ನ.೪-ಕನ್ನಡಿಗರ ಸಾರಥ್ಯದಲ್ಲಿ ಕರವೇ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಹಾಗೂ ಶಾಶ್ವತ ನೀರಾವರಿ ಹೋರಾಟಗಾರರಾದ ಅಗಲಗುರ್ಕಿ ಚಲಪತಿ ಅವರಿಗೆ ೭೧ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ’ಕನ್ನಡ ಶ್ರೀ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.


ಬೆಂಗಳೂರಿನ ವಿಧಾನಸೌಧದ ಮುಂದೆ ಏರ್ಪಡಿಸಿದ್ದ ಈ ಸತ್ಕಾರ ಸಮಾರಂಭದಲ್ಲಿ ಕನ್ನಡಿಗರ ಸಾರಥ್ಯದಲ್ಲಿ ಕರವೇ ಸಂಘಟನೆಯ ಯಲಹಂಕ ವಿಭಾಗದ ನಗರ ಅಧ್ಯಕ್ಷ ಶಿವಕುಮಾರ್ ನಾಯಕ್, ನಗರ ಕಾರ್ಯದರ್ಶಿ ಮಂಜುನಾಥ್ ಹಾಗೂ ಸಂಘಟನೆಯ ಸಕ್ರಿಯ ಸದಸ್ಯರಾದ ಯಲಹಂಕ ವಿಭಾಗದ ಶೋಭಾ ಕಮಲ ಅವರುಗಳು ಹಿರಿಯ ಕನ್ನಡಪರ ಮತ್ತು ಶಾಶ್ವತ ನೀರಾವರಿ ಹೋರಾಟಗಾರರಾದ ಅಗಲಗುರ್ಕಿ ಚಲಪತಿ ಅವರಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.


ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನವಾಗಿದ್ದು, ಕನ್ನಡ ಭಾಷೆಗೆ ಧಕ್ಕೆ ತರುವ ಯಾವುದೇ ಸಂದರ್ಭದಲ್ಲಿಯೂ ಕನ್ನಡಿಗರ ಸಾರಥ್ಯದಲ್ಲಿ ಕರವೇ ಸಂಘಟನೆ ಹೋರಾಟ ಹಮ್ಮಿಕೊಳ್ಳಲಿದೆ ಹಾಗೂ ’ಕನ್ನಡಿಗರಿಗಾಗಿ ಕರ್ನಾಟಕ’ ಎಂಬ ಸಂದೇಶವನ್ನು ತಿಳಿಸಲಾಯಿತು.