Home ಜಿಲ್ಲೆ ಬೆಂಗಳೂರು ಮಹಿಳಾ ಸಮಾಜ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆ

ಮಹಿಳಾ ಸಮಾಜ ಆಡಳಿತ ಮಂಡಳಿ ಅಧ್ಯಕ್ಷರಾಗಿ ರಾಜೇಶ್ವರಿ ಆಯ್ಕೆ

ಕೋಲಾರ, ನ. ೩- ನಗರದ ಹೊಸ ಬಡಾವಣೆಯಲ್ಲಿನ ಮಹಿಳಾ ಸಮಾಜ ಆಡಳಿತ ಮಂಡಳಿಗೆ ನೂತನವಾಗಿ ರಾಜೇಶ್ವರಿ ರಾಜಶೇಖರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಹಿಳಾ ಸಮಾಜದ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಭೆಯು ಅ. ೧೭ರಂದು ನಡೆದಿದ್ದು, ಸದರಿ ಸಭೆಯ ನಿರ್ಣಯದಂತೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಕೋರಿಕೆಯಂತೆ ಅ. ೩೧ರ ಶನಿವಾರ ಬೆಳಿಗ್ಗೆ ನಡೆದ ಮಹಿಳಾ ಸಮಾಜದ ಆವರಣದಲ್ಲಿ ಸಂಘದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಲಾಗಿತ್ತು.


ಸಭೆಯಲ್ಲಿ ಅಧ್ಯಕ್ಷ ಆಯ್ಕೆಯ ಪ್ರಸ್ತಾವನೆಗಾಗಿ ಚುನಾವಣೆಯನ್ನು ಸದಸ್ಯರು ಕೈ ಎತ್ತುವ ಮೂಲಕ ಆಯ್ಕೆಗೆ ನಿರ್ಧರಿಸಲಾಯಿತು.


ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಶ್ರೀಮತಿ ಜಿ.ಎಸ್. ರಾಜೇಶ್ವರಿ ರಾಜಶೇಖರ್ ಅವರನ್ನು ಅಧ್ಯಕ್ಷರ ಸ್ಪರ್ಧೆಗೆ ಪ್ರಾಂಶುಪಾಲೆ ಶ್ರೀಮತಿ ನವೀನ ಸುದರ್ಶನ್ ಅವರ ಬೆಂಬಲಿತರಾಗಿ ಸ್ಪರ್ಧಿಸಿದ್ದರು, ಚುನಾವಣೆದಲ್ಲಿ ಬಹುಮತದಿಂದ ಆಯ್ಕೆಯಾದರು ಎಂದು ಆಡಳಿತ ಮಂಡಳಿ ತಿಳಿಸಿದೆ.