ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನವೆಂಬರ ೧೫ ರಂದು ಜರುಗುವ ತಾಲೂಕು ೭ನೇ ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರೇನರ್ತಿ ಗ್ರಾಮದ ಖ್ಯಾತ ಸಂಗೀತ ವಿದ್ವಾನ್ ಪಂ ಹುಸೇನಬಾಬು ಇಮಾಮಸಾಹೇಬ ನದಾಫ ಅವರನ್ನು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮಂಡಳಿಯಿAದ ಅಧಿಕೃತವಾಗಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ಹೊಸೂರ, ಉಪಾಧ್ಯಕ್ಷ ಬಿ.ಬಿ.ಹರ್ತಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಗುಡ್ಡದಕೇರಿ, ಉಪ ಖಜಾಂಚಿ ರ್ಯಾವಪ್ಪ ಬಡಿಗೇರ, ಸದಸ್ಯರಾದ ಶಿಕ್ಷಕಿ ಶಾಂತಾ ಹೂಗಾರ, ರುದ್ರಮುನೀಶ್ವರ ಹಿರೇಮಠ, ಅ.ಬಾ.ಕ.ಸಾ.ಪ ಅಧ್ಯಕ್ಷ ಎಲ್ ಬಿ ನೇಕಾರ್, ಮಂಜುನಾಥ ಸೊರಟೂರ ಮತ್ತಿತರರಿದ್ದರು.