
ಕಲಬುರಗಿ: ಭಾಷೆಗೆ ಗಡಿಇಲ್ಲ. ಸಮುದಾಯ, ಧರ್ಮಗಳೆಂಬ ಸಂಕೋಲೆಗಳಿಲ್ಲ. ಕರ್ನಾಟಕ ಅನೇಕ ಭಾಷೆ ಗಳಿಗೆ ತವರೂರು ಎಂದು ಇಲ್ಲಿನ ಖ್ಯಾತ ಕನ್ನಡ ಲೇಖಕರು ಹಾಗೂ ಅನುವಾದಕರಾದ ಪೆÇ್ರ. ಆರ್. ಕೆ. ಹುಡಗಿ ಅವರು ಹೇಳಿದರು.
ನಗರದ ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕನ್ನಡ ಮತ್ತು ಇತಿಹಾಸ ವಿಭಾಗದ ವತಿಯಿಂದ ಇಲ್ಲಿನಬ ವಿಶ್ವವಿದ್ಯಾಲಯದ ಆವರಣದಲ್ಲಿರುವ ಫೆÇರೆನ್ಸಿಕ್ ಕಟ್ಟಡದ ಉಪನ್ಯಾಸ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು, ನಾಡು ನುಡಿ ಸಂಸ್ಕøತಿಯ ಕುರಿತು ಉಪನ್ಯಾಸ ನೀಡಿದರು.
ಈ ರಾಜ್ಯೋತ್ಸವ ಸಮಾರಂಭದಲ್ಲಿ ಖ್ವಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಗೌರವಾನ್ವಿತ ಪೆÇ್ರ ಉಪಕುಲಪತಿಗಳಾದ ಪೆÇ್ರ. ಸಯ್ಯದ ಅಶ್ಫಾಕ್ ಅಹ್ಮದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನ್ನಡ ಭಾಷೆಯ ಮಹತ್ವದ ಬಗ್ಗೆ ಹೇಳಿದರು. ಕನ್ನಡವನ್ನು ಬೆಳೆಸೋದು ನಮ್ಮೆಲ್ಲರ ಕರ್ತವ್ಯ ಎಂದರು.
ಇನ್ನೊರ್ವ್ ಅತಿಥಿ ಇಂಜಿನಿಯರಿಂಗ ಡೀನ್ ಪೆÇ್ರ ಸುಭಾಷ ಕಮಲ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಮಾಣಿಕ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಯಾವ ಸೋಲನ್ನು ಯಶಸ್ಸಾಗಿ ಪರಿವರ್ತಿಸುತ್ತದೆ ಎಂದರು.
ಕಲೆ, ಮಾನವಿಕ, ಸಮಾಜ ವಿಜ್ಞಾನ, ಭಾಷೆ ಮತ್ತು ಕಾನೂನು ನಿಕಾಯದ ಡೀನ್ ಆಗಿರುವ ಪೆÇ್ರ. ನಿಶಾತ್ ಆರಿಫ್ ಹುಸೈನಿ ಅವರು ಅಧ್ಯಕ್ಷೀಯ ಸಮಾರೋಪದಲ್ಲಿ ಮಾನವನ ಜೀವನದಲ್ಲಿ ಭಾಷೆಯ ಮಹತ್ವದ ಬಗ್ಗೆ ವಿವರಿಸಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ನಿಬಂಧ್, ರಸ ಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಹುಮೆರಾ ಫಾತಿಮಾ ಕಿರಾತ ಪ್ರಸ್ತುತ ಪಡಿಸಿದಳು, ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ ಸಂಗನಗೌಡರ ಪ್ರಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಯೋಗೇಶ ಸ್ವಾಗತಿಸಿದರೆ, ಡಾ ಅಸ್ಲಮ ವಾಲಿಕಾರ ಪರಿಚಯಿಸಿದರು. ಮಾಧ್ಯಮ ಸಂಯೋಜಕಾರದ ಡಾ ನಮ್ರತಾ ರಾವುತ ನಿರೂಪಿಸಿದರೆ ಕನ್ನಡ ವಿಭಾಗದ ಪೆÇ್ರ ರಾಜಸಾಹೇಬ ವಂದಿಸಿದರು.























