
ಕಲಬುರಗಿ,ಅ.26-ಕಲಬುರಗಿಯ ಸಿಮೆಂಟ್ ಕಂಪನಿಯ ಕ್ಷೆತ್ರಸಾಲ ಯಾರ್ಡ್ನಲ್ಲಿ ನಿಲ್ಲಿಸಿದ್ದ ಟಾಟಾ ಹಿಟಾಚಿ 11,800 ರೂ.100 ರಿಂದ 120 ಲೀಟರ್ ಡಿಸೇಲ್ ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ 11,800 ರೂ.ಮೌಲ್ಯದ ಡಿಸೇಲ್ ಜಪ್ತಿ ಮಾಡಲಾಗಿದೆ.
ಔರಂಗಬಾದ ಜಿಲ್ಲೆಯ ಗುಲಾಬಿಗ್ ಗ್ರಾಮದ ಸುಮಿತ್ ಕುಮಾರ್ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣದ ಪತ್ತೆಗಾಗಿ ಎಸ್ಪಿ, ಹೆಚ್ಚುವರಿ ಎಸ್ಪಿ, ಚಿಂಚೋಳಿ ಡಿಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪೀಲ್ದೇವ್ ಅವರ ಮಾರ್ಗದರ್ಶನದಲ್ಲಿ ಮಿರಿಯಾಣಾ ಪಿಎಸ್ಐ ಶಿವಶಂಕರ ಸುಬೇದಾರ ಹಾಗೂ ಸಿಬ್ಬಂದಿಗಳಾದ ಎಎಸ್ಐ ಅಶೋಕ, ಶಾಂತವೀರ, ರಾಜಕುಮಾರ, ಬಲರಾಮ, ಪ್ರಶಾಂತ್, ಸುಲೇಮಾನ್, ಮಹಾಂತೇಶ ನಾಯಕ, ಅಶೋಕ ರೆಡ್ಡಿ, ಕಾಶಿನಾಥ, ಮಂಜುನಾಥ ಮತ್ತು ಗವಿಸಿದ್ದಯ್ಯ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿ ಬಸಿರಾಬಾದನ ಮುಜಾಹಿದ್ ಯೂಸೂಫ್ ಅಲಿ, ಫಜಿಲ್ ಅಜ್ಗರ್ ಅಲಿ, ಸೋಹೆಬ್ ಮುನಾವರ್ ಹಾಗೂ ದಾವುದ್ ಶೇಖ್ ಚಾಂದ್ ಎಂಬುವವರನ್ನು ಬಂಧಿಸಿ 11,800 ರೂ.ಮೌಲ್ಯದ ಡಿಸೇಲ್ ಜಪ್ತಿ ಮಾಡಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.






















