ಸನ್‌ರೈಸ್ ಫೌಂಡೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಫೌಂಡೇಶನ್ ವತಿಯಿಂದ ಬೆಂ. ದಕ್ಷಿಣ ತಾಲ್ಲೂಕು ಪಿಳ್ಳಗಾನ ಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಟೈ ಮತ್ತು ಬೆಲ್ಟ್ ಗಳನ್ನು ಸಂಸ್ಥೆಯ ಅಧ್ಯಕ್ಷ ಮುನಿನಾರಾಯಣರವರು ವಿತರಣೆ ಮಾಡಿದರು. ಜಿಲ್ಲಾ ಅಧ್ಯಕ್ಷರಾದ ಆನಂದ್ ಕೃಷ್ಣಪ್ಪ, ರಾಮಸಿಂಗ್, ಪಾಂಡಿಯನ್, ರಂಗಣ್ಣ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಉಪಾಧ್ಯಾಯರು ಉಪಸ್ಥಿತರಿದ್ದರು.