Home ಜಿಲ್ಲೆ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

ಕೆ.ಆರ್.ಪುರ, ಜು. ೧೪- ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ರಾರಾಜಿಸುವಲ್ಲಿ ಪ್ರಮುಖ ಕಾರಣ ನಾಡಪ್ರಭು ಕೆಂಪೇಗೌಡರು ಎಂದು ಶಾಸಕ ಶರತ್ ಬಚ್ಚೇಗೌಡ ಅವರು ಹೇಳಿದರು.


ಮಹದೇವಪುರ ಕ್ಷೇತ್ರದ ನಿಂಬೆಕಾಯಿಪುರದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಶ್ರೀಭುವನೇಶ್ವರಿ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀಕೆಂಪೇಗೌಡರ ಜಯಂತಿ ಹಾಗೂ ಕುಲಭಾಂಧವರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಮಾಜದ ಋಣ ತೀರಿಸುವ ಉದ್ದೇಶದಿಂದ ಶ್ರೀಭುವನೇಶ್ವರಿ ಒಕ್ಕಲಿಗರ ಸಂಘ ಉತ್ತಮ ಕೆಲಸಗಳನ್ನು ಮಾಡುತ್ತ ಬರುತ್ತಿದ್ದು ಈ ಸಂಘಕ್ಕೆ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ. ಸಂಘದಿಂದ ಬಡ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿಗಳನ್ನು ನೀಡುತ್ತೇನೆ ಎಂದು ವೇದಿಕೆಯಲ್ಲಿ ಘೋಷಿಸಿದರು.


ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಮಾತನಾಡಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಪಡೆದ ಅರವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗೌರವಧನವಾಗಿ ಐದು ಸಾವಿರ ರೂಪಾಯಿ ಚೆಕ್ ವಿತರಿಸಲಾಯಿತು.


ಜನಪದರು ಸಾಂಸ್ಕೃತಿಕ ವೇದಿಕೆಯಿಂದ ಜಯರಾಮ್ ರಾಯಪುರ ಅವರು ರಚಿಸಿರುವ ಕೆಂಪೇಗೌಡರ ಕುರಿತ ವಿಭಿನ್ನ ನಾಟಕ ಸಿರಿಗೆ ಸೆರೆ ನಾಟಕ ಪ್ರದರ್ಶನ ನಡೆಯಿತು.


ಈ ಸಂಧರ್ಭದಲ್ಲಿ ಶ್ರೀಭುವನೇಶ್ವರಿ ಒಕ್ಕಲಿಗ ಸಂಘದ ಅಧ್ಯಕ್ಷ ಪಿ.ಎಂ.ನಾಗರಾಜು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಆದಾಯ ತೆರಿಗೆ ಮುಖ್ಯ ಆಯುಕ್ತ ಜಯರಾಮ್ ರಾಯಪುರ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಡಿಐಜಿ ಡಿ.ದೇವರಾಜ್, ಎಂ.ಪಿ.ಅಶ್ವಥ್ ಕುಮಾರ್,ರಾಜಹಂಸ, ಜ್ಯೋತಿಪುರ ಚಂದ್ರು,ಎಂ.ಎಸ್.ನಂಜುಂಡಪ್ಪ, ಬಿ.ಕೃಷ್ಣಪ್ಪ ಜಯಗೋಪಾಲ್ ಗೌಡ, ಮಹದೇವಯ್ಯ, ಎಸ್.ಎಲ್.ವಿ.ಶೇಖರ್, ಎನ್.ಸುರೇಶ್ ಬಾಬು, ಎಂ.ರಮೇಶ್ ಇದ್ದರು.