
ಕಲಬುರಗಿ: ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನಗಳಲ್ಲಿ ಅಕ್ರಮ ವೆಸಗಿರುವ ಭ್ರಷ್ಟ ಅಧಿಕಾರಿಗಳ *ಅಮಾನತು ಗೊಳಿಸಬೇಕೆಂದು ಹಾಗೂ ಸಿಎ ನಿವೇಶನ ವಶಕ್ಕೆ ಆಗ್ರಹಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರುಗಡೆ ಇಂದಿನಿಂದ ಅನಿರ್ದಿಷ್ಠವಾದ ಧರಣಿ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂಎಸ್ ಪಾಟೀಲ್ ನರಿಬೋಳ, ಹುಚ್ಚೇಶ್ವರ ವಠಾರ, ಲಕ್ಷ್ಮಿಕಾಂತ್ ಸ್ವಾದಿ, ರಾಜು ವಾಗಮೊರೆ, ಗಣೇಶ್ ರಾಥೋಡ್, ವೀರೇಶ್ ಬಿಂಗೆ, ರವಿ ರಾಠೋಡ್, ಪ್ರಶಾಂತ್ ಶಿರೂರ ಇದ್ದರು.





























