Home ಜಿಲ್ಲೆ ಕಲಬುರಗಿ ದಂತ ದಿನಾಚರಣೆ: ಹಲ್ಲಿನ ಪರೀಕ್ಷೆಯ ತಪಾಸಣೆ ಶಿಬಿರ

ದಂತ ದಿನಾಚರಣೆ: ಹಲ್ಲಿನ ಪರೀಕ್ಷೆಯ ತಪಾಸಣೆ ಶಿಬಿರ

ಕಲಬುರಗಿ,ಜು.೯-ಕಾರಾಗೃಹದಲ್ಲಿ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆ, ಕಡಗಂಚಿ, ಅಲ್ ಬ್ರದರ್ ಡೆಂಟಲ್ ಆಸ್ಪತ್ರೆ, ಕಲಬುರಗಿ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಹಲ್ಲಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಫಾದರ್ ವಿಲಿಯಮ್ ಮಿರಿಂಡಾ ಸೇಕ್ರೇಟರಿ ಕಾರ್ಮಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್(ರಿ) ಶಾಖೆ, ಕಡಗಂಚಿರವರು “ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ” ನೀಡಿ ಮಾತನಾಡುತ್ತಾ, ಈ ಭಾಗದಲ್ಲಿ ಸಮಾಜ ಮುಖಿ ಹಾಗೂ ಕೆಲಸ ಕಾರ್ಯಕ್ರಗಳನ್ನು ಮಾಡಲು ಕಡಗಂಚಿಯ ಹತ್ತಿರ ೩ನೇ ಶಾಖೆಯನ್ನು ಪ್ರಾರಂಭಿಸಲಾಯಿತು. ಆರೋಗ್ಯ ಮಹಾ ಭಾಗ್ಯವೆಂಬ ದೃಷ್ಟಿ ಕೋಣದಿಂದ ನಾವುಗಳು ಮಾರ್ಚ್ ೭ರಂದು ದಂತ ದಿನಾಚರಣೆ ಪ್ರಯುಕ್ತ ಕಾರಾಗೃಹದ ಬಂದಿಗಳಿಗೆ ಹಲ್ಲಿನ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು
ಅಲ್ಲದೇ ಮುಂದಿನ ದಿನಗಳಲ್ಲಿ ಉಳಿದ ಆರೋಗ್ಯ ಸಮಸ್ಯೆಗಳ ಶೀಘ್ರವಾಗಿ ಶಿಬಿರಗಳನ್ನು ಆಯೋಜಿಸಲಾಗುವುದು.
ಅತಿಥಿಗಳಾಗಿ ಆಗಮಿಸಿದ ಡಾ|| ಸಂಗೀತಾ (ಹೆಚ್.ಓ.ಡಿ) ಅಲ್ ಬ್ರದರ್, ಡೆಂಟಲ್ ಆಸ್ಪತ್ರೆ, ಕಲಬುರಗಿರವರು ಮಾತನಾಡುತ್ತಾ, ಹಲ್ಲು ನಮ್ಮ ದೇಹದ ಮುಖ್ಯ ಅಂಗ ಹಾಗಾಗಿ ನಿಯಮಿತವಾಗಿ ಹಲ್ಲಿನ
ರಕ್ಷಣೆಯನ್ನು ಮಾಡುವುದು. ಹಲ್ಲು ಇಲ್ಲದಿದ್ದರೆ ಮಾತನಾಡಲು, ಸೌಂದರ್ಯ, ಆಹಾರ ಅಗಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಹಲ್ಲಿನ ಆರೋಗ್ಯ ಮುಖ್ಯ ಅದಕ್ಕಾಗಿ
ಪ್ರತಿದಿನ ೨ ಸಲ ಹಲ್ಲಿನ ಬ್ರೆಷ್ ಮಾಡುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಡಾ|| ಅನಿತಾ ಆರ್. ಮುಖ್ಯ ಅಧೀಕ್ಷಕರು, ಸ್ವತಹ ದಂತ ವೈದ್ಯರು ಆಗಿರುವುದರಿಂದ ಬಂದಿಗಳಲ್ಲಿ ಹಲ್ಲಿನ ಆರೋಗ್ಯದ ಬಗ್ಗೆ ಕುಲಂಕುಷವಾಗಿ ವಿವರಿಸಿ ಬಂದಿ ನಿವಾಸಿಗಳು, ಹಲ್ಲನ್ನು ಸರಿಯಾದ ರೀತಿಯಲ್ಲಿ ಉಜ್ಜುವುದನ್ನ ಕರಗತ ಮಾಡಿಕೊಳ್ಳಲು ಹೇಳಿದರು. ಅಲ್ಲದೇ ಮುಂದೆ ನಿಂತು ಈ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಶಿಬಿರದಲ್ಲಿ ಈ ಸಂಸ್ಥೆಯ ವೈದ್ಯಾಧಿಕಾರಿ ಡಾ|| ಆನಂದ ಅಡಕಿ, ಸಹಾಯಕ ಅಧೀಕ್ಷಕರು ಶ್ರೀ ಚನ್ನಪ್ಪ, ಜೈಲರ್‌ಗಳಾದ ಶ್ರೀಮತಿ ಸುನಂದ, ಶ್ರೀ ಸಾಗರ ಪಾಟೀಲ್, ಶ್ರೀ ಶ್ಯಾಮ ಬಿದ್ರಿ ಹಾಗೂ ಅಲ್ ಬ್ರದರ್ ದಂತ ಆಸ್ಪತ್ರೆ ಕಲಬುರಗಿಯ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿದರು ಈ ಶಿಬಿರದಲ್ಲಿ ಒಟ್ಟು ೮೯ ಜನರನ್ನು ತಪಾಸಣೆ ಮತ್ತು ಸಂಚಾರಿ ಬಸ್‌ನಲ್ಲಿ ಸ್ಕಿçÃನಿಂಗ್ ತಪಾಸಣೆ ಮಾಡಲಾಯಿತು.
ಈ ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಶ್ರೀ ಬಿ. ಸುರೇಶ್‌ರವರು ನಡೆಸಿಕೊಟ್ಟರು. ನಿರುಪಣೆ ಮತ್ತು ವಂದನಾರ್ಪಣೆಯನ್ನು ಈ ಸಂಸ್ಥೆಯ ಶಿಕ್ಷಕರಾದ ಶ್ರೀ ನಾಗರಾಜ ಮುಲಗೆರವರು ನಡೆಸಿಕೊಟ್ಟರು.