
ಬೆಂಗಳೂರು,ಜು.೭-ಮಾದಕ ವಸ್ತುಗಳ ಸಾಗಾಣೆ ಮಾರಾಟ ಸೇವನೆ ವಿರುದ್ಧ ಸಮರ ಸಾರಿರುವ ನಗರ ಪೊಲೀಸರು ಹೊರರಾಜ್ಯದ ೯ ಸ್ಥಳೀಯ ಇಬ್ಬರು ಸೇರಿ ೧೧ ಮಂದಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೫.೭೦ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ವಿದ್ಯಾರಣ್ಯಪುರ, ಜೀವನಭೀಮಾನಗರ, ದೇವನಹಳ್ಳಿ ಹಾಗೂ ಹೆಬ್ಬಗೋಡಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಂಧಿತ ೧೧ ಮಂದಿ ಹೊರರಾಜ್ಯದ ಡ್ರಗ್ ಫೆಡ್ಲರ್ ಗಳಿಂದ ೫.೯೦ ಲಕ್ಷ ನಗದು,
೨ ಕೆ.ಜಿ ಎಂಡಿಎಂಎ,೧ ಕೆಜಿ ೭೬೭ ಗ್ರಾಂ ಹೈಡೋಗಾಂಜಾ, ೩೨ ಕೆಜಿ ೯೨೦ ಗ್ರಾಂ ಗಾಂಜಾ,೨ ಐ-ಪೋನ್, ೧ ದ್ವಿಚಕ್ರ ವಾಹನ ಸೇರಿ ೫.೭೦ ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರಣ್ಯಪುರ ಪೊಲೀಸರು ತ್ರಿಪುರದ ಸಂದೀಪ್ ಮಲ್ಲಿಕ್(೨೬)ಶಂತನು ಹೆರ್ಬಂಮಾ(೨೪)ನನ್ನು ಬಂಧಿಸಿ ೪ ಕೋಟಿ ಮೌಲ್ಯದ ೨ ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ದೇವನಹಳ್ಳಿ ಪೊಲೀಸರು ಬಿಹಾರದ ತುಪಾನಿ ಯಾದವ್(೩೦) ಬಿಟ್ಟುಕುಮಾರ್(೨೮) ಸುಶಾಂತ್ ಕುಮಾರ್ (೨೦)ತ್ರಿಪುರದ ಲಿಟ್ಟಿನ್ ದೇಬನಾಥ್(೩೨)ಪಶ್ಚಿಮ ಬಂಗಾಳದ ಸುಮನ್ ದಾಸ್ (೨೩) ನನ್ನು ಬಂಧಿಸಿ ೧೬.೭೦ ಲಕ್ಷ ಮೌಲ್ಯದ ೧೬ ಕೆಜಿ೯೨೦ ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಹೆಬ್ಬಗೋಡಿ ಪೊಲೀಸರು ಮೊಹಮ್ಮದ್ ಕುಂದರ್(೩೨) ನಿತೇಶ್ ಪೂಜಾರಿ(೩೨)ನನ್ನು ಬಂಧಿಸಿ ೧೬ ಲಕ್ಷ ಮೌಲ್ಯದ ೧೬ ಕೆಜಿ ಗಾಂಜಾ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜೀವನಭೀಮಾನಗರ ಪೊಲೀಸರು ಕೇರಳದ ಜಾಸೀರ್(೩೨) ಅಭಿಷೇಕ್(೨೧)ನನ್ನು ಬಂಧಿಸಿ ೧.೩೭ ಕೋಟಿ ಮೌಲ್ಯದ ೧ಕೆಜಿ ೭೬೭ ಗ್ರಾಂ ಹೈಡ್ರೋ ಗಾಂಜಾ ೫.೯೦ ಲಕ್ಷ ನಗದು, ಐಪೋನ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಂಧಿತ ೧೧ಮಂದಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರ ರಾಜ್ಯದ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ರೊಪ್ಪಿಕೊಂಡಿರುತ್ತಾರೆ.
ಬಂಧಿತ ೧೧ಮಂದಿ ಆರೋಪಿಗಳನ್ನು ವಿವಿಧ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಗಳನ್ನು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ.ಮಿಥುನ್ ಕುಮಾರ್, ಪೂರ್ವ ವಿಭಾಗದ ಡಿಸಿಪಿ ಡಾ:ವಿಕ್ರಮ್ ಅಮಟೆ, ಎಲೆಕ್ಟ್ರಾನಿಕ್‌ಸಿಟಿ ವಿಭಾಗದ ಡಿಸಿಪಿ ನಾರಾಯಣ್.ಎಂ ಮಾರ್ಗದರ್ಶನದಲ್ಲಿ ಎಸಿಪಿ ಇನ್ಸ್‌ಪೆಕ್ಟರ್‌ಗಳಾದ ಮತ್ತವರ ಸಿಬ್ಬಂದಿ ಕೈಗೊಂಡಿದೆ ಎಂದು ತಿಳಿಸಿದರು.






























