
ಕುಂದಗೋಳ ಜು.೨: ಶಿಕ್ಷಣೇತರ ಕೆಲಸಕ್ಕೆ ಶಿಕ್ಷಕರನ್ನು ಬಳಸುತ್ತಿರುವದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚಿಸಲೆತ್ನಿಸುತ್ತೇನೆ ಎಂದು ಶಾಸಕ ಎಂ.ಆರ್.ಪಾಟೀಲ ಹೇಳಿದರು.
ಶಿವಾನಂದ ಮಠದ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಕೆಎಎಮ್ಎಸ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ ಶಾಲಾಭಿವೃದ್ದಿ ಸಮಿತಿಯಲ್ಲಿ ರಾಜಕಾರಣ ಮಾಡುವ ಪ್ರವೃತ್ತಿಯಿಂದ ಶಾಲೆಯ ಮುಖ್ಯಶಿಕ್ಷಕರಿಗೆ ತಲೆನೋವಾಗಿತ್ತು. ಆದರೆ ಈಗ ಅದಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದೇನೆ ಎಂದರು.
ರಾಷ್ಟಾçಧ್ಯಕ್ಷ ಬಸವರಾಜ ಗುರಿಕಾರ, ರಾಜ್ಯಾಧ್ಯಕ್ಷ ಚಂದ್ರಶೇಖರ, ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ ಹಾಗೂ ರಾಜಶೇಖರ ಹೊನ್ನಪ್ಪನವರ್, ಜಯಕುಮಾರ್ ಹೆಬ್ಳಿ, ಅಜಿತ್ ದೇಸಾಯಿ, ಎಂ .ಎಂ ಗೋಡಕಿಂಡಿ, ಎನ್ ಎಫ್ ನದಾಫ್ ಕಾನಿಪ ತಾಲೂಕು ಅಧ್ಯಕ್ಷ ಅಶೋಕ ಘೋರ್ಪಡೆ ಮತ್ತಿತರರಿದ್ದರು.
























