
ಕಲಬುರಗಿ: ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ರಂಗಮಂದಿರದವರೆಗೆ ಇಂದು ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರು ಸಂಗ್ರಹಿಸಿದ ವಚನ ಸಾಹಿತ್ಯದ ಭವ್ಯ ಮೆರವಣಿಗೆಗೆ ಎಂಎಲ್‍ಸಿ ಶಶೀಲ ಜಿ.ನಮೋಶಿ ಚಾಲನೆ ನೀಡಿದರು. ಶಿವರಾಜ ಅಂಡಗಿ, ವಿನೋದಕುಮಾರ ಜನವರಿ, ಚನ್ನಮಲ್ಲಪ್ಪ ಯಳಸಂಗಿ, ಸತೀಶ ಜಮಖಂಡಿ, ಶ್ರೀನಿವಾಸ ಬಲ್ಪುರ್, ಚಂದ್ರಶೇಖರ್ ಮ್ಯಾಳಗಿ, ರಾಜು ಕೋಷ್ಠಿ ಇದ್ದರು.
























