
ಜಮಖಂಡಿ, ಜು 2: ತಾಲೂಕಿನ ಚಿಕ್ಕಲಕಿ ಕ್ರಾಸ್ ಸಮೀಪದ ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಯುವಕ ಒರ್ವ ನಿಗೂಢ ಸಾವಿಗೆ ಸಂಬಂಧಿಸಿದಂತೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದಾರೆ.
ಮೃತರನ್ನು ಮುಧೋಳ ತಾಲೂಕಿನ ಮುಗಳಕೋಡ ಗ್ರಾಮದ ನಿವಾಸಿ, 27 ವರ್ಷದ ಮಲ್ಲಪ್ಪ ಸಿದ್ದಪ್ಪ ಕಬ್ಬೂರ ಎಂದು ಗುರುತಿಸಲಾಗಿದೆ.
ಮಲ್ಲಪ್ಪ ಅವರು ಕಳೆದ ಹಲವು ವರ್ಷಗಳಿಂದ ಕಾತ್ರಾಳ ಗ್ರಾಮದಲ್ಲಿ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತ ಯುವಕ ಮಲ್ಲಪ್ಪ ವಿಶ್ರಾಂತಿ ಪಡೆಯಲು ಚಿಕ್ಕಪಡಸಲಗಿ ಪುನರ್ವಸತಿ ಕೇಂದ್ರದಲ್ಲಿ ಮನೆ ಮಾಡಿಕೊಂಡು ಇದ್ದನ್ನು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ, ಸಾವಳಗಿ ಪಿಎಸ್‍ಐ ಅಪ್ಪಣ್ಣ ಐಗಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲಪ್ಪ ಕಬ್ಬೂರ ಅವರ ಸಾವು ನಿಗೂಢವಾಗಿದ್ದು, ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಮರಣದ ನಿಜವಾದ ಕಾರಣ ಪೆÇಲೀಸ್ ತನಿಖೆಯಿಂದಲೇ ಬಹಿರಂಗವಾಗಬೇಕಿದೆ.
ಸಿಪಿಐ ಮಲ್ಲಪ್ಪ ಮಡ್ಡಿ ನೇತೃತ್ವದ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡು ಮೃತ ದೇಹವನ್ನು ಜಮಖಂಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
























