Home ಸುದ್ದಿ ರಾಷ್ಟ್ರೀಯ ಅಮರನಾಥ ಯಾತ್ರೆಗೆ ಅಧಿಕೃತ ಚಾಲನೆ

ಅಮರನಾಥ ಯಾತ್ರೆಗೆ ಅಧಿಕೃತ ಚಾಲನೆ

ಜಮ್ಮು ಕಾಶ್ಮೀರ,ಜು.2-ದೇಶದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದೆಂದು ಪರಿಗಣಿಸಲಾದ ಅಮರನಾಥ ಯಾತ್ರೆ ಇಂದು ಜುಲೈ 2 ರಂದು ಪ್ರಾರಂಭವಾಗಿದೆ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಗವತಿ ನಗರ ಮೂಲ ಶಿಬಿರದಿಂದ ಅಮರನಾಥ ಯಾತ್ರೆ 2026 ರ ಮೊದಲ ಬ್ಯಾಚ್‍ಗೆ ಚಾಲನೆ ನೀಡಿದ್ದಾರೆ.

ಬಂ ಬಂ ಭೋಲೆ” ಮತ್ತು “ಹರ ಹರ ಮಹಾದೇವ್” ಘೋಷಣೆಗಳ ನಡುವೆ,ನೈಸರ್ಗಿಕ ಹಿಮ ಶಿವಲಿಂಗದ ದರ್ಶನ ಪಡೆಯಲು ಮೊದಲ ಬ್ಯಾಚ್ ಕಾಶ್ಮೀರ ಕಣಿವೆಗೆ ಹೊರಟಿತು.
ಇಂದು ಒಟ್ಟು 4,822 ಯಾತ್ರಿಕರು 259 ವಾಹನಗಳಲ್ಲಿ ಅಮರನಾಥ ಗುಹಾ ದೇಗುಲಕ್ಕೆ ಹೊರಟರು. ಈ ಯಾತ್ರಿಕರು ಪಹಲ್ಗಾಮ್ ಮತ್ತು ಬಾಲ್ಟಾಲ್ ಎಂಬ ಎರಡು ಮಾರ್ಗಗಳ ಮೂಲಕ ಪ್ರಯಾಣಿಸಲಿದ್ದಾರೆ. ಈ ವರ್ಷದ ಯಾತ್ರೆಗೆ ಭದ್ರತೆ ಮತ್ತು ಸೌಲಭ್ಯಗಳ ಬಗ್ಗೆ ಆಡಳಿತವು ವಿಶೇಷ ಒತ್ತು ನೀಡಿದೆ.

ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪೂಜೆ ಸಲ್ಲಿಸಿದ ನಂತರ, ಜಮ್ಮುವಿನಿಂದ ಮೊದಲ ಬ್ಯಾಚ್ ಯಾತ್ರಿಕರು ಬಿಗಿ ಭದ್ರತೆಯಲ್ಲಿ ಬಾಲ್ಟಾಲ್ ಮತ್ತು ಪಹಲ್ಗಾಮ್‍ಗೆ ತೆರಳಿದ್ದಾರೆ.
ಈ ಎಲ್ಲಾ ಭಕ್ತರು ಶುಕ್ರವಾರ ಬೆಳಿಗ್ಗೆ ಪವಿತ್ರ ಗುಹೆಗೆ ತೆರಳಲಿದ್ದಾರೆ.

ನೈಸರ್ಗಿಕವಾಗಿ ರೂಪುಗೊಂಡ ಹಿಮದ ಶಿವಲಿಂಗದ ದರ್ಶನಕ್ಕೆ ಭಕ್ತರು ಈ ಯಾತ್ರೆ ಕೈಗೊಳ್ಳುತ್ತಾರೆ. ಈ ವರ್ಷದ 57 ದಿನಗಳ ಯಾತ್ರೆಯು ಜುಲೈ 3 ರಂದು ಏಕಕಾಲದಲ್ಲಿ ಎರಡು ಮಾರ್ಗಗಳಿಂದ ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಸಾಂಪ್ರದಾಯಿಕ 48-ಕಿ.ಮೀ. ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‍ಬಲ್ ಜಿಲ್ಲೆಯ ಕಡಿದಾದ ಆದರೆ ಕಡಿಮೆ ಅಂತರದ 14-ಕಿ.ಮೀ. ಬಾಲ್ಟಾಲ್ ಮಾರ್ಗದಲ್ಲಿ ಯಾತ್ರೆ ಸಾಗಲಿದೆ. ಯಾತ್ರೆಯು ಆಗಸ್ಟ್ 28 ರಂದು ರಕ್ಷಾ ಬಂಧನ ದಿನದಂದು ಮುಕ್ತಾಯಗೊಳ್ಳಲಿದೆ
ಯಾತ್ರೆಯ ಸಮಯದಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.ಭಕ್ತರು ಸೇನೆಯ ಅಭೇದ್ಯ ಭದ್ರತೆಯಲ್ಲಿ ಮುಂದುವರೆದಿದೆ .

, ಇದು ಈ ವರ್ಷದ 57 ದಿನಗಳ ಬಾಬಾ ಬರ್ಫಾನಿ ತೀರ್ಥಯಾತ್ರೆಯ ಆರಂಭವನ್ನು ಸೂಚಿಸುತ್ತದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯ ಕಾರ್ಯದರ್ಶಿ ಅಟಲ್ ಡಲ್ಲೂ, ಹಿರಿಯ ಆಡಳಿತ ಮತ್ತು ಪೆÇಲೀಸ್ ಅಧಿಕಾರಿಗಳೊಂದಿಗೆ ಬೇಸ್ ಕ್ಯಾಂಪ್‍ಗೆ ಭೇಟಿ ನೀಡಿ ಭದ್ರತೆ, ನೋಂದಣಿ, ಆರೋಗ್ಯ ಸೇವೆಗಳು, ಲಂಗಾರ್, ಕುಡಿಯುವ ನೀರು, ನೈರ್ಮಲ್ಯ, ಸಂಚಾರ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪವಿತ್ರ ಬಾಬಾ ಅಮರನಾಥ ದೇಗುಲಕ್ಕೆ ಯಾತ್ರೆ ಅಧಿಕೃತವಾಗಿ ಆರಂಭವಾಗಿದೆ, ಮೊದಲ ಗುಂಪು ಗುರುವಾರ (ಜುಲೈ 2) ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಲಿದೆ. ಬಿಗಿ ಭದ್ರತೆಯಲ್ಲಿ ಈ ಗುಂಪು ಇಂದು ಸಂಜೆ ಶ್ರೀನಗರಕ್ಕೆ ಆಗಮಿಸಲಿದೆ. ಈ ವರ್ಷ, ಗಮನಾರ್ಹ ಸಂಖ್ಯೆಯ ಯುವಕರು ಮೊದಲ ಬಾರಿಗೆ ಶಿವಲಿಂಗ ದರ್ಶನ ಪಡೆಯಲು ಯಾತ್ರೆಗೆ ಹಾಜರಾಗುತ್ತಿದ್ದಾರೆ.

ಅಮರನಾಥ ಯಾತ್ರೆಯನ್ನು ಅತ್ಯಂತ ಕಷ್ಟಕರ ಮತ್ತು ಸವಾಲಿನ ಯಾತ್ರೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಯಾತ್ರೆಯ ಸಂಪೂರ್ಣ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಕೇಂದ್ರ ಅರೆಸೈನಿಕ ಪಡೆಗಳು, ಪೆÇಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳನ್ನು ನಿಯೋಜಿಸಲಾಗಿದೆ. ಯಾತ್ರೆಯ ಸಮಯದಲ್ಲಿ ನಿರಂತರ ಗಸ್ತು, ಭದ್ರತಾ ತಪಾಸಣೆ ಮತ್ತು ಕಣ್ಗಾವಲು ನಿರ್ವಹಿಸಲಾಗುವುದು. ಅಲ್ಲದೆ, ಭಕ್ತರ ಅನುಕೂಲಕ್ಕಾಗಿ ವೈದ್ಯಕೀಯ ಶಿಬಿರಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು ಮತ್ತು ತುರ್ತು ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.