Home ಜಿಲ್ಲೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿ

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿ

ಸಂಜೆವಾಣಿ ವಾರ್ತೆ

ಸಂಡೂರು :ಜೂ:29  ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಕೆ.ಪಿ.ಎಸ್. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೊಭಾವನೆ ಬೆಳೆಸಲು ಪೋಷಕರಲ್ಲಿ ಶಿಕ್ಷಣದ ಮಹತ್ವ ಅರಿವು ಮೂಡಿಸಲು ಹಾಗೂ ಶಿಕ್ಷಕರಿಗೆ ಬೋದನಾ ಕೌಶಲ್ಯ ಕುರಿತು ಮಾರ್ಗದಶ್ನ ನೀಡುವ ಉದ್ದೇಶದಿಂದ ವಿಶೇಷ ಪ್ರೇರಣಾತ್ಮಕ ಹಾಗೂ ವೈಜ್ಞಾನಿಕ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಸ್ತುತ ಕಲಬುರಗಿ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ|| ಸಣ್ಣಕ್ಕಿ ಬಸವರಾಜ ಮುಖ್ಯ ಅತಿಥಿಯಾಗಿ ಬಾಗವಹಿಸಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದರು. ಕಾರ್ಯಕ್ರಮದಲ್ಲಿ ಡಾ|| ಬಸವರಾಜ ವೆಂಕಟೇಶ ಮುಖ್ಯ ಶಿಕ್ಷಕ ಕೆ.ಬಿ. ಪ್ರಕಾಶ್ ಮಾತನಾಡಿದರು. ಈ ಸಂದರ್ಭದಲ್ಲಿ ದುರುಗಪ್ಪ ದಿ. ಬಸವರಾಜ ಮುಖ್ಯೋಪಾದ್ಯಯರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಯರ್ರಿಸ್ವಾಮಿ. ಸಿ.ಆರ್.ಪಿ. ನಾಗರಾಜ ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಗ್ರಾಮಸ್ಥರುಪಾಲಕರು, ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿಕ್ಷಕ ಕವಿತಾ ಸ್ವಾಗತಿಸಿದರು. ಶಿಕ್ಷಕ ವೀರಭದ್ರಯ್ಯ ಕಾರ್ಯಕ್ರಮವನ್ನ ನಿರೂಪಿಸಿದರು.