
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.29: ದೇಶದ ಎಲ್ಲ ಜನರೂ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಿ ಭಾರತದ ಮಕ್ಕಳನ್ನು ಪೋಲಿಯೋದಿಂದ ರಕ್ಷಿಸಿ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಡಿ.ಬಸವರಾಜ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಪೋಲಿಯೋ ಮುಕ್ತವಾಗಿದೆ. ಆದರೂ ಸಮೀಪದ ದೇಶಗಳಲ್ಲಿ ಪೋಲಿಯೋ ಪತ್ತೆ ಆಗಿರುವುದರಿಂದ ನಾವು ಜಾಗೃತರಾಗಲು ಮತ್ತೆ ಲಸಿಕೆ ಹಾಕಲಾಗುತ್ತಿದೆ ಎಂದರು.
ಶಾಸಕ ಬಿ.ಎಂ ನಾಗರಾಜ್ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಡಳಿತ ವೈದ್ಯಾಧಿಕಾರಿ ಡಾ. ವಿವೇಕಾನಂದ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಹ್ಲಾದ್, ಭೀಮರಾಯ ರೆಡ್ಡಿ, ಮಹಮ್ಮದ್ ಖಾಸಿಂ, ಮಲ್ಲೇಶಪ್ಪ ಹಾಗೂ ಇನ್ನಿತರರು ಇದ್ದರು.
























