Home ಜಿಲ್ಲೆ ವಿಜಯೋತ್ಸವ ಆಚರಣೆ

ವಿಜಯೋತ್ಸವ ಆಚರಣೆ


ಹುಬ್ಬಳ್ಳಿ,ಮೇ.೩೧:
ಕರ್ನಾಟಕ ರಾಜ್ಯದ ನೂತನ ನಿಯೋಜಿತ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ ಆಯ್ಕೆಯಾಗಿರುವುದಕ್ಕೆ ಅವರ ಅಭಿಮಾನಿಗಳೂ ಹಾಗೂ ಪಕ್ಷದ ಹಿರಿಯ ಮುಖಂಡ ಸತೀಶ ಮೇಹರವಾಡೆ ರವರ ನೇತೃತ್ವದಲ್ಲಿ ನಗರದ ಕೇಶ್ವಾಪೂರ ಸರ್ವೋದಯ ಸರ್ಕಲ್‌ನಲ್ಲಿ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಫುಲ್ ಚಂದ್ರ ರಾಯನಗೌಡರ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ, ಪಾಲಿಕೆ ಸದಸ್ಯರಾದ ಪ್ರಕಾಶ ಕುರಹಟ್ಟಿ, ಸುವರ್ಣ ಕಲ್ಲಕುಂಟ್ಲಾ, ಮಹೇಂದ್ರ ಸಿಂಘಿ, ಅನ್ವರ ಮುಧೋಳ, ರಾಜಶೇಖರ ಮೆಣಸಿನಕಾಯಿ, ಹೂವಪ್ಪ ದಾಯಗೋಡಿ , ಗಿರೀಶ ಮಲೆನಾಡು, ಬಂಗಾರೇಶ ಹಿರೇಮಠ, ಮಹೇಶ ದಾಬಡೆ,ವಿಶ್ವನಾಥ ಮೇಹರವಾಡೆ, ಈಶ್ವರ ಶಿರಸಂಗಿ, ಅನಿಲ್ ಕುರಹಟ್ಟಿ, ತಾರಾದೇವಿ ವಾಲಿ, ದೊಡ್ಡರಾಮಪ್ಪ ದೊಡ್ಡಮನಿ, ಬಸವರಾಜ ಬೆಣಕಲ್ಲ, ಪ್ರೇಮನಾಥ ಚಿಕ್ಕತುಂಬಳ, ಪೀರಾಜಿ ಖಂಡೇಕಾರ, ಯಲ್ಲಪ್ಪ ಮೇಹರವಾಡೆ,ಮಹಾದೇವ ಹುಡೇದ, ಆನಂದ ಮುರಗೋಡ,ಪರಶು ಬಿಲಾನಾ,ತಾರಾದೇವಿ ವಾಲಿ ಗೀತಾ ಪಾಟೀಲ, ಗಿರಿಜಾ ಹೂಗಾರ,ಕಲಾವತಿ ದತ್ತವಾಡ, ಮಹೇಶ ಕಾರವಾರಕರ ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಹಿರಿಯ ಕಾಂಗ್ರೆಸ್ ಮುಖಂಡ ಗಂಗಾಧರ ದೊಡ್ಡವಾಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಶಾರೂಖ ಮುಲ್ಲಾ ವಂದಿಸಿದರು.