Home ಜಿಲ್ಲೆ ಮಾಡುವ ಕೆಸಲದಲ್ಲಿ ಶ್ರದ್ಧೆ, ಪ್ರೀತಿ, ಪ್ರಾಮಾಣಿಕತೆಬೇಕು: ಕಡಬೂರ

ಮಾಡುವ ಕೆಸಲದಲ್ಲಿ ಶ್ರದ್ಧೆ, ಪ್ರೀತಿ, ಪ್ರಾಮಾಣಿಕತೆಬೇಕು: ಕಡಬೂರ


ಧಾರವಾಡ, ಮೇ ೩೧: ಯಾವುದೇ ಹುದ್ದೆ ದೊಡ್ಡದಲ್ಲ, ವ್ಯಕ್ತಿಯ ವ್ಯಕ್ತಿತ್ವ ದೊಡ್ಡದು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ ಹಾಗೂ ಪ್ರಾಮಾಣಿಕತೆಯನ್ನು ಹೊಂದಿರಬೇಕು. ಇಲಾಖೆಯ ಜೊತೆಗೆ, ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಲ್ಲಿಕಾರ್ಜುನ ಕಂಪಲಿ ಅವರು ವಾರ್ತಾ ಇಲಾಖೆಯ ರಾಯಭಾರಿಗಳಂತೆ ಕಾರ್ಯನಿರ್ವಹಿಸಿದ್ದಾರೆ. ಮಾಧ್ಯಮ ಹಾಗೂ ಅಧಿಕಾರಿಗಳಿಗೆ ಪ್ರೀತಿ ಪಾತ್ರರಾಗಿದ್ದಾರೆ. ಅವರ ಸರಳ, ಸಜ್ಜನಿಕೆ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿದೆ ಎಂದು ವಾರ್ತಾ ಇಲಾಖೆಯ ಬೆಳಗಾವಿ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು ತಿಳಿಸಿದರು.


ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಭವನದಲ್ಲಿ ಜರುಗಿದ ವಾಹನ ಚಾಲಕ ಮಲ್ಲಿಕಾರ್ಜುನ ಕಂಪಲಿ ಅವರ ಸೇವಾ ನಿವೃತ್ತಿ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.
ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಸರ್ಕಾರ ಮತ್ತು ಆಡಳಿತದ ವರ್ಚಸ್ಸು ಹೆಚ್ಚಿಸುವಲ್ಲಿ ಹೆಚ್ಚು ಪ್ರಮುಖ ಪಾತ್ರ ನಿರ್ವಹಿಸಿದಂತೆ. ಮಲ್ಲಿಕಾರ್ಜುನ ಕಂಪಲಿ ಅಂತಹ ಸಿಬ್ಬಂದಿಗಳು ಮಾಧ್ಯಮ ಹಾಗೂ ಇತರರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಇಲಾಖೆಯ ಕೆಲಸ ಕಾರ್ಯಗಳನ್ನು ಸುಗಮಗೊಳಿಸುತ್ತಾರೆ ಎಂದರು.


ಓರ್ವ ಚಾಲಕನಾಗಿದ್ದು, ಇಬ್ಬರು ಪ್ರತಿಭಾವಂತ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಿ, ವೈದ್ಯರನ್ನಾಗಿ ರೂಪಿಸಿರುವುದು ಅಧಿಕಾರಿಗಳಿಗೆ ಮಾದರಿಯಾಗಿದೆ. ಅವರ ಸೇವೆ ಹಾಗೂ ವಿನಯತೆ ವಾರ್ತಾ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ವಾರ್ತಾ ಇಲಾಖೆಯ ಬೆಳಗಾವಿ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು ಹೇಳಿದರು.
ವಾರ್ತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಬಸವರಾಜ ಕಂಬಿ ಅವರು ಮಾತನಾಡಿ, ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದರು. ನನ್ನ ಆಡಳಿತ ಅವಧಿಯಲ್ಲಿ ನೇಮಕವಾದವರು. ಇಂದು ಅವರು ನಿವೃತ್ತರಾಗುತ್ತಿದ್ದಾರೆ. ಸರ್ಕಾರ ಕೆಲಸವನ್ನು ಪ್ರೀತಿಸಿ ಕಾರ್ಯನಿರ್ವಹಣೆ ಮಾಡುತ್ತಿದ್ದರು ಎಂದು ಅವರು ಹೇಳಿದರು.


ವಾರ್ತಾ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೈದಿದ್ದಾರೆ. ಅವರ ತಾಯಿಗೆ ಅನಾರೋಗ್ಯ ಪೀಡಿತರಾಗಿದ್ದಾಗ ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಕೆಲಸದ ಒತ್ತಡದ ನಡುವೆ ತಾಯಿ ಸೇವೆಯನ್ನು ಮಾಡಿದ್ದಾರೆ. ಮಕ್ಕಳು ಕೂಡ ಪ್ರತಿಭಾವಂತರಾಗಿದ್ದಾರೆ. ಅವರು ಕ?À್ಟಪಟ್ಟಿದ್ದಕ್ಕೂ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.


ವಾರ್ತಾ ಇಲಾಖೆಯ ವಿಶ್ರಾಂತ ಹಿರಿಯ ಸಹಾಯಕ ನಿರ್ದೇಶಕ ಪಿ.ಎಸ್.ಪರ್ವತಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ಸಾಕ?ÀÄ್ಟ ಚಿರಪರಿಚಿತರಾಗಿದ್ದರು. ಬೆಳಗಾವಿ ಅಧಿವೇಶನದಲ್ಲಿ ಮಾಧ್ಯಮದವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಧಿಕಾರಗಳ ಜೊತೆ ಉತ್ತಮ ರೀತಿಯಲ್ಲಿ ವರ್ತಿಸುತ್ತಿದ್ದರು. ಅವರ ಸಮಯ ಪ್ರಜ್ಞೆಯನ್ನು ನಾವು ರೂಢಿಸಿಕೊಳ್ಳಬೇಕು ಎಂದು ಹರಿಸಿದರು.
ವಾರ್ತಾ ಇಲಾಖೆಯ ವಿಶ್ರಾಂತ ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ.ಮಾಯಾಚಾರಿ ಅವರು ಮಾತನಾಡಿ, ವಸ್ತು ಪ್ರದರ್ಶನ ವಾಹನವನ್ನು ಅಚ್ಚುಕಟ್ಟಾಗಿ ಚಾಲನೆ ಮಾಡುತ್ತಿದ್ದರು. ಅವರು ವಾಹನ ಚಾಲನೆಯಲ್ಲಿ ಪರಿಣಿತಿಯನ್ನು ಹೊಂದಿದ್ದರು. ಮಾಧ್ಯಮದವರನ್ನು ಸಕಾಲಕ್ಕೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಮರಳಿ ತಂದು ಬಿಡುತ್ತಿದ್ದರು ಎಂದು ಹೇಳಿದರು.


ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ ಅವರು ಮಾತನಾಡಿ, ಆರೋಗ್ಯ ಪೂರ್ಣವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಕಂಪಲಿ ಅವರ ಜೊತೆ ಅವಿನಾಭಾವ ಸಂಬAಧ ಹೊಂದಿದ್ದೇನೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸಾಕ?ÀÄ್ಟ ಉತ್ತಮ ಸೇವೆ ಸಲ್ಲಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಡಾಕ್ಟರ್‌ರನ್ನಾಗಿ ಮಾಡಿದ್ದಾರೆ. ಅವರ ಬಗ್ಗೆ ಬಹಳ?ÀÄ್ಟ ಹೆಮ್ಮೆ ವ್ಯಕ್ತಪಡಿಸುತ್ತೇನೆ. ಧಾರವಾಡ ಪತ್ರಕರ್ತರೊಂದಿಗೆ ನಗು ನಗುತ್ತಾ ಕೆಲಸ ಮಾಡುತ್ತಿದ್ದರು. ಮುದ್ದಿನ ಜೀವನದಲ್ಲಿ ಅವರು ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಿ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಅವರು ಹೇಳಿದರು.


ಟಿವಿ ೯ ವಾಹಿನಿಯ ಹಿರಿಯ ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಅವರು ಮಾತನಾಡಿ, ಸಂಗಪ್ಪ ಮತ್ತು ಮಲ್ಲಿಕಾರ್ಜುನ ಕಂಪಲಿ ಇಬ್ಬರು, ವಾರ್ತಾ ಇಲಾಖೆ ನಮ್ಮ ಜೊತೆ ಇದ್ದಂತೆ ಎಂದು ಭಾಸವಾಗುತ್ತಿತ್ತು. ವಾಹನ ಚಾಲನೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನೋಡಿ ವಾಹನ ಚಾಲನೆ ಮಾಡುವುದನ್ನು ಕಲಿಯಬೇಕು. ಅ?À್ಟರಮಟ್ಟಿಗೆ ಅವರ ವಾಹನ ಚಾಲನೆಯಲ್ಲಿ ಪರಿಣಿತಿಯನ್ನು ಹೊಂದಿದ್ದರು. ಹಿರಿಯ ಕಿರಿಯರಿಗೆ ಅವರು ನೀಡುತ್ತಿದ್ದ ಗೌರವ ವರ್ತನೆಯನ್ನು ನಾವು ಅಳವಡಿಸಿಕೊಳ್ಳಬೇಕು. ಅವರ ವ್ಯಕ್ತಿತ್ವ ನಮಗೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು.
ಪಬ್ಲಿಕ್ ಟಿವಿಯ ಹಿರಿಯ ವರದಿಗಾರ ಜಾವೀದ ಅಧೋನಿ ಅವರು ಮಾತನಾಡಿ, ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದವರು. ಅವರಿಗೆ ಯಾವುದೇ ರೀತಿಯ ಅಹಂ ಇರಲಿಲ್ಲ. ಅವರ ವೃತ್ತಿಯನ್ನು ಅತ್ಯಂತ ಅನ್ಯೋನ್ಯವಾಗಿ ಕಳೆದಿದ್ದಾರೆ. ಮಾಧ್ಯಮದವರೊಂದಿಗೆ ಅತೀ ಆತ್ಮೀಯತೆಯಿಂದ ಒಡನಾಟ ಹೊಂದಿದ್ದರು ಎಂದು ಅವರು ಹೇಳಿದರು.


ಕನ್ನಡ ಪ್ರಭ ಪತ್ರಿಕೆಯ ಹಿರಿಯ ಪ್ರಧಾನ ವರದಿಗಾರ ಬಸವರಾಜ ಹಿರೇಮಠ ಅವರು ಮಾತನಾಡಿ, ಮಾಧ್ಯಮದವರನ್ನು ಅತ್ಯಂತ ಸುರಕ್ಷತೆಯಿಂದ ಕರೆದುಕೊಂಡು ಹೋಗಿ ಬರುತ್ತಿದ್ದರು. ಅವರ ಹಾಗೆ ನಾವು ಜೀವನ ನಡೆಸೋಣ. ಅವರಿಗೆ ಆಯು?À್ಯ ಆರೋಗ್ಯ ದೇವರು ನೀಡಲಿ ಎಂದು ಅವರು ಹಾರೈಸಿದರು.


ಕಂಪಲಿಯವರ ಹಿರಿಯ ಪುತ್ರ ಡಾ. ಮಿಥುನ್ ಹಾಗೂ ಡಾ. ಮಹೇಶ ಕಂಪಲಿ ಅವರು ಮಾತನಾಡಿ, ಮಕ್ಕಳು ಉನ್ನತ ಸ್ಥಾನವನ್ನು ಅಲಂಕರಿಸುವುದು ನಮ್ಮ ತಂದೆಯವರ ಕನಸಾಗಿತ್ತು. ಅವರ ಕನಸಿನಂತೆ ಉತ್ತಮ ಶಿಕ್ಷಣ ಪಡೆದಿದ್ದೇವೆ. ನಮ್ಮ ತಾಯಿ ಅವರು ಸಹ ಸಾಕ?ÀÄ್ಟ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಮಲ್ಲಿಕಾರ್ಜುನ ಕಂಪಲಿ ಅವರು ಮಾತನಾಡಿ, ವಾರ್ತಾ ಇಲಾಖೆಯ ಸುದೀರ್ಘ ಸೇವೆಯ ಸಮಯದಲ್ಲಿ ನಾನು ಸಾಕ?ÀÄ್ಟ ಕಲಿತಿದ್ದೇನೆ. ಪ್ರಾರಂಭದಲ್ಲಿ ಎಲ್ಲವೂ ಹೊಸದು, ಅಸ್ಪ?À್ಟವೂ ಆಗಿತ್ತು. ಆದರೆ ಪ್ರತಿಯೊಂದು ಸವಾಲು ನನ್ನನ್ನು ಬಲಿ?À್ಠ ಮಾಡಿತು. ಸಹೋದ್ಯೋಗಿಗಳ ಸಹಕಾರ ಮತ್ತು ಮಾಧ್ಯಮದವರ ವಿಶ್ವಾಸ ನನಗೆ ಸದಾ ಪ್ರೇರಣೆ ನೀಡುತ್ತಿತ್ತು. ನನ್ನ ಜೀವನದಲ್ಲಿ ಪ್ರತಿ ಕ್ಷಣವೂ ಕಡೆಯವರೆಗೂ ನನಗೆ ನೆನಪು ಆಗುವಂತಿದೆ ಎಂದು ಇಂದು ಸೇವಾ ನಿವೃತ್ತಿ ಹೊಂದಿರುವ ಮಲ್ಲಿಕಾರ್ಜುನ ಕಂಪಲಿ ಅವರು ಹೇಳಿದರು.


ನಾನು ಯಾವಾಗಲೂ ಸಹೋದ್ಯೋಗಿಗಳೊಂದಿಗೆ ಹಾಗೂ ಪತ್ರಕರ್ತರೊಂದಿಗೆ ನಿ?ೆ್ಠ ಮತ್ತು ಆತ್ಮೀಯತೆಯಿಂದ ನಡೆದುಕೊಂಡೆ. ಯಾವತ್ತೂ ಬೇಧಭಾವವಿಲ್ಲದೆ, ಎಲ್ಲರೊಂದಿಗೆ ಸಮಾನ ಮನೋಭಾವದಿಂದ ಸಂಪರ್ಕ ಹೊಂದಿದ್ದೇನೆ. ವಾರ್ತಾ ಇಲಾಖೆಯ ಸಿಬ್ಬಂದಿ ಮತ್ತು ಮಾಧ್ಯಮದವರೊಂದಿಗೆ ಬೆಳೆಸಿಕೊಂಡ ಸಂಬAಧವು ನನ್ನ ಜೀವನದ ಅತ್ಯಂತ ಅಮೂಲ್ಯ ಭಾಗವಾಗಿದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಗೆ ಬಂದಿದ್ದೆ ಒಂದು ಪವಾಡದಂತಿತ್ತು. ೨೦೧೯ ರಿಂದ ಕ್ಷೇತ್ರ ಪ್ರಚಾರ ಅಂತ್ಯವಾಯಿತು. ಹಾಗೂ ಮಾಧ್ಯಮದವರು ನನ್ನ ಮೇಲೆ ಅತಿಯಾದ ವಿಶ್ವಾಸ ಹೊಂದಿದ್ದರು. ಮಾಧ್ಯಮದವರ ಜೊತೆ ಆತ್ಮೀಯತೆಯು ಒಂದು ಕುಟುಂಬದ ರೀತಿಯಲ್ಲಿ ನಾವು ಇದ್ದೆವು ಹಾಗೂ ವಾರ್ತಾ ಇಲಾಖೆ ಹಾಗೂ ಪತ್ರಕರ್ತರು ಅವಿನಾಭಾವ ಸಂಬAಧವನ್ನು ನಾವೆಲ್ಲರೂ ಹೊಂದಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಾದ ಬಸವರಾಜ ಪಟಾತ್, ಪರಮೇಶ ಅಂಗಡಿ, ಮಂಜುನಾಥ ಯಡಳ್ಳಿ, ಶ್ರೀಧರ ಮುಂಡರಗಿ, ಶಶೀಧರ ಬುದ್ನಿ, ನಾಗರಾಜ ಮಗದುಮ್, ಪ್ರವೀಣ ಓಂಕಾರಿ, ಗುರು ಪಾಟೀಲ, ಪ್ರಶಾಂತ ದಿನ್ನಿ, ರಾಹುಲ್ ಹೂಲಿ, ಅಕ್ಷಯ ಕಮತಗಿ ಸೇರಿದಂತೆ ಇತರರು ಮಲ್ಲಿಕಾರ್ಜುನ ಕಂಪಲಿ ಅವರ ಕುರಿತು ಮಾತನಾಡಿದರು.


ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಸುರೇಶ ಹಿರೇಮಠ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ಕಚೇರಿಯ ಅನಂತ ಪಪ್ಪು ವಂದಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿವೃತ್ತ ಅಧಿಕಾರಿ, ಸಿಬ್ಬಂದಿಗಳು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ವಾರ್ತಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಮಲ್ಲಿಕಾರ್ಜುನ ಕಂಪಲಿ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು.