
ಲಕ್ಷೆ÷್ಮÃಶ್ವರ,ಮೇ.೩೧ : ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಗೆ ಶಿರಹಟ್ಟಿ ತಾಲೂಕ ನೋಡಲ್ ಅಧಿಕಾರಿ ಹಾಗೂ ಗದಗ್ ಜಿಲ್ಲಾ ಡ?ಟ್ ಉಪ ಪ್ರಾಚಾರ್ಯ ಜಿಎಂ ಮುಂದಿನ ಮನಿ ಅವರು ಭೇಟಿ ನೀಡಿ ಶಾಲಾ ಪ್ರಾರಂಭೋತ್ಸವದ ಮಾರ್ಗಸೂಚಿಗಳನ್ನು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಪ್ರಸಕ್ತ ಶೈಕ್ಷಣಿಕ ವರ್ಷ ಶಾಲಾ ಪ್ರಾರಂಭೋತ್ಸವ ಸೇತುಬಂಧ ಕಾರ್ಯಕ್ರಮ ಶಾಲಾ ವೇಳಾಪಟ್ಟಿ ಶಾಲಾ ಸ್ವಚ್ಛತೆ ಬಿಸಿಯುಟದ ವ್ಯವಸ್ಥೆ ಪಠ್ಯಪುಸ್ತಕ ಮತ್ತು ಸಮಸ್ಯೆ ವಿತರಣೆ ಮುಂತಾದ ಸರ್ಕಾರದ ಯೋಜನೆಗಳ ಕುರಿತು ಮಾರ್ಗದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಸವರಾಜ್ ಕುಂಬಾರ್ ಸಿಆರ್ಪಿಸಿ ಶ್ರೀನಿವಾಸ್ ಮತ್ತೂರ ಇದ್ದರು ಇದೇ ಸಂದರ್ಭದಲ್ಲಿ ಇಂದಿರಾನಗರ ಶಾಲೆಗೆ ಮುಖ್ಯೋಪಾಧ್ಯಾಯರಾಗಿದ್ದ ಎಲ್ ಆರ್ ಮಲಸಮುದ್ರ ನಿವೃತ್ತಿಯಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

























