Home ಜಿಲ್ಲೆ ಕಲಬುರಗಿ ಬಿತ್ತುವ ಪೂರ್ವ ಬೀಜೋಪಚಾರ ಕಡ್ಡಾಯ

ಬಿತ್ತುವ ಪೂರ್ವ ಬೀಜೋಪಚಾರ ಕಡ್ಡಾಯ

ಕಲಬುರಗಿ: ತೊಗರಿ, ಹೆಸರು, ಉದ್ದು ಮತ್ತು ಇತರೆ ಬೀಜಬಿತ್ತುವ ಮುಂಚೆ ಕಡ್ಡಾಯವಾಗಿ ಕೃಷಿ ವಿಜ್ಞಾನ ಕೇಂದ್ರ ಅಥವಾ ಹತ್ತಿರದಕೃಷಿ ಇಲಾಖೆಯಲ್ಲಿ ಲಭ್ಯವಿರುವ ಜೈವಿಕ ಗೊಬ್ಬರವನ್ನು ಕಡ್ಡಾಯವಾಗಿಬೀಜೋಪಚಾರ ಮಾಡಬೇಕು. ಎಲ್ಲಾ ರೈತರು ಕಡಿಮೆ ಖರ್ಚಿನತಂತ್ರಜ್ಞಾನಗಳನ್ನು ಅಳವಡಿಸಿ ಹೆಚ್ಚಿನ ಲಾಭ ಪಡೆಯಬೇಕೆಂದು ಜೇವರ್ಗಿ ಸಮೀಪದ ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ಮುಖ್ಯಸ್ಥರಾದ ಡಾ. ಪಿ.ವಾಸುದೇವ ನಾಯ್ಕ್ ಅವರು ರೈತರಿಗೆ ವಿನಂತಿಸಿದ್ದಾರೆ.
ಬೀಜೊಪಚಾರದ ಕ್ರಮವು ಹೀಗಿದೆ.ಬಿತ್ತನೆ ಮಾಡುವ ಮೊದಲು ಬೀಜಗಳಿಗೆ ಶಿಲೀಂಧ್ರನಾಶಕ (ಟ್ರೇಕೋಡರ್ಮಾ, ರೈಜೋಬಿಯಂ) 4 ರಿಂದ 5 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಜೈವಿಕ ಅಣುಜೀವಿ ಗೊಬ್ಬರವನ್ನು ಲೇಪನ ಮಾಡುವುದಕ್ಕೆಬೀಜೋಪಚಾರವೆಂದು ಹೇಳುತ್ತಾರೆ.ಬೀಜಗಳಲ್ಲಿ ಬರನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ.2ರಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 1 ತಾಸು ನೆನೆಸಿ ನಂತರ ನೆರಳಿನಲ್ಲಿಕನಿಷ್ಠ 7 ತಾಸು ಒಣಗಿಸಬೇಕು.ಬೀಜಗಳನ್ನು ರೈಜೋಬಿಯಂ (200ಗ್ರಾಂ ಪ್ರತಿ ಎಕರೆ ಬೀಜಕ್ಕೆ) ಹಾಗೂರಂಜಕ ಕರಗಿಸುವ ಗೊಬ್ಬರದಿಂದ (ಪಿ.ಎಸ್.ಬಿ 200ಗ್ರಾಂ ಪ್ರತಿ ಎಕರೆ ಬೀಜಕ್ಕೆ)ಉಪಚರಿಸಬೇಕು.ರೈಜೋಬಿಯಂನ್ನು ಬೀಜೋಪಚಾರ ಮಾಡುವುದರಿಂದ ಬೆಳೆಗೆಶಿಫಾರಸ್ಸು ಮಾಡಿದ ಶೇ.50 ರಷ್ಟು ಸಾರಜನಕವನ್ನು ಉಳಿಸಬಹುದು.ನೆಟೆರೋಗದ ನಿರ್ವಹಣೆಗೆ 4 ಗ್ರಾಂ ಟ್ರೈಕೋಡರ್ಮಾ ಜೈವಿಕ ಜೀವಾಣುಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿದ ಬೀಜಗಳನ್ನು ನೇರಳಿನಲ್ಲಿಒಣಗಿಸಿ ನಂತರ ಬಿತ್ತನೆ ಮಾಡಬೇಕು.ಜೈವಿಕ ಗೊಬ್ಬರಗಳನ್ನು ಉಪಚಾರ ಮಾಡಲು ಬೆಲ್ಲದ ದ್ರಾವಣವನ್ನುಅವಶ್ಯಕತೆ ಇದೆ. ದ್ರಾವಣವು ಅಂಟು ರೂಪಕ್ಕೆ ಬಂದಾಗ ಬೀಜಗಳಿಗೆ ಲೇಪನಮಾಡಬೇಕು.
ವಿಶೇಷ ಸೂಚನೆ:
ರದ್ದೇವಾಡಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಧಾರಿತ ತೊಗರಿ ತಳಿ: ಜಿ.ಆರ್.ಜಿ-152, ಜಿ.ಆರ್.ಜಿ-811 ಬೀಜಗಳು ಮಾರಾಟಕ್ಕೆ ಲಭ್ಯವಿದೆ.ಆಸಕ್ತರು ಕೇಂದ್ರಕ್ಕೆ ಭೇಟಿ ಕೊಟ್ಟು ಬೀಜಗಳನ್ನು ಖರೀದಿಸಲು ತಿಳಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ಮುಖ್ಯಸ್ಥ ಡಾ. ಪಿ.ವಾಸುದೇವ ನಾಯ್ಕ್ ಅವರನ್ನು ಸಂಪÀರ್ಕಿಸಬಹುದು: 9739598464,8296203191