
ಚಿಂಚೋಳಿ,ಮೇ 31: ಪಟ್ಟಣದ ಬುದ್ಧ ವಿಹಾರದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಆನಂದಕುಮಾರ ಟೈಗರ್ ಅವರ ನೇತೃತ್ವದಲ್ಲಿ ನೂತನ ಸರ್ಕಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಒದಗಲಿ ಎಂದು ಬುದ್ಧ ವಿಹಾರದಲ್ಲಿ ಬುದ್ಧನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಆನಂದ ಟೈಗರ್, ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅವರು ತಮದೇ ವರ್ಚಸ್ಸಿನಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ನಡೆಸಿದ್ದಾರೆ ಹೀಗಾಗಿ ಅವರು ಇಂದಿನ ಯುವ ಪೀಳಿಗೆಗೆ ಮಾದರಿ ನಾಯಕ ಎನ್ನಿಸಿದ್ದಾರೆ. ಸಚಿವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಿದೆಯಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ಪಕ್ಷದ ಸಂಘಟನೆ ಗಟ್ಟಿಯಾಗಿ ಬಲವರ್ಧನೆಗೊಳಲಿದೆ. ಅವರು ಎಲ್ಲಾ ಜಾತಿ ಜನಾಂಗದವರನ್ನು ಒಂದೇ ರೀತಿಯಲ್ಲಿ ಕಾಣುವ ಸಹೃದಯಿ ನಾಯಕ ಎನ್ನಿಸಿಕೊಂಡಿದ್ದಾರೆ. ಅಲ್ಲದೇ ಪ್ರಿಯಾಂಕ್ ಖರ್ಗೆ ಅವರು ತಮ್ಮನ್ನು ಭೇಟಿಯಾಗಲು ಬಂದ
ಚಿಕ್ಕವರು, ದೊಡ್ಡವರು ಅನ್ನದೆ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಆಲಿಸುವುದಲ್ಲದೆ ಎಲ್ಲರನ್ನು ಅಪ್ಪಿಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳು ಮೈಗೂಡಿಸಿಕೊಂಡು ಪಾಲನೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರದ ಕಾಂಗ್ರೆಸ ಪಕ್ಷದ ವರಿಷ್ಠರು ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಿ ನೀಡಿ, ಕಲ್ಯಾಣ ಕರ್ನಾಟಕ ಭಾಗದ ಯುವ ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತ ಅಭಿಮಾನಿಗಳದ ಆಸೆಯಾಗಿದ್ದು, ವರಿಷ್ಠರು ಪ್ರಿಯಾಂಕ್ ಖರ್ಗೆ, ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಒದಗಿಸಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಆನಂದ ಟೈಗರ್ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷ ಬಸವರಾಜ ಮಲಿ, ಹಿರಿಯ ಮುಖಂಡ ಬಾಬುರಾವ್ ಪಾಟೀಲ್, ಜಿ. ಪಂ. ಮಾಜಿ ಅಧ್ಯಕ್ಷ ದೀಪನಾಗ ಪುಣ್ಯಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಬ್ದುಲ್ ಬಾಶೀದ್, ವಿಶ್ವನಾಥ ಹೊಡೆಬಿರನಳ್ಳಿ, ನಾಗೇಶ ಗುಣಾಜಿ, ವಿಜಯಕುಮಾರ ಘಾಟ್ಗೆ, ಕಾಶಿನಾಥ ಶಿಂಧೆ, ಆರ್ ಗಣಪತರಾವ, ಲಕ್ಷ್ಮಣ ಆವಂಟಿ, ಅನಿಲ ಜಮಾದಾರ್ ಹುಡದಳ್ಳಿ, ಮಗಸೂದ ಸೌದಾಗರ್, ಓಮನರಾವ್ ಕೊರವಿ, ರಾಮಶೆಟ್ಟಿ ಪವಾರ, ಡಾ. ತುಕಾರಾಮ ಪವಾರ, ವೀರಶೆಟ್ಟಿ ಪಾಟೀಲ್, ಲೋಕೇಶ ಐನೋಳಿ, ಶಶಿಕುಮಾರ ಮೇತ್ರಿ, ವಿಲಾಸ್ ದೇಗಲಮಡಿ, ಅಕ್ಷಯ್ ಕೊರವಿ, ಶಂಕರ್ ಕುಸಳೆ, ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಇದ್ದರು

























