Home ಜಿಲ್ಲೆ ಅಕ್ರಮ ಮರಳು ಸಾಗಾಣಿಕೆ ತಡೆಗೆ ಮನವಿ

ಅಕ್ರಮ ಮರಳು ಸಾಗಾಣಿಕೆ ತಡೆಗೆ ಮನವಿ


ಲಕ್ಷೆ÷್ಮÃಶ್ವರ,ಮೇ.೨೭: ತಾಲೂಕಿನ ಅಕ್ಕಿಗುಂದ ಬಟ್ಟೂರು ಅಮರಾಪುರ ಹುಲ್ಲೂರು , ಹಿರೇಮಲ್ಲಾಪುರ ಬಡ್ನಿ ಆದರಹಳ್ಳಿ ನೆಲಗಲ್ಲು ಮಾಡಳ್ಳಿ ಸೇರಿದಂತೆ ಅನೇಕ ಕಡೆ ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ನಡೆದಿದ್ದು ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗುಡಿ ತಾಲೂಕ ಘಟಕದ ಅಧ್ಯಕ್ಷ ನಾಗೇಶ ಅಮರಾಪುರ ಅವರ ನೇತೃತ್ವದಲ್ಲಿ ಬುಧವಾರ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.


ಮನವಿ ಪತ್ರದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಹಾನಿ ಮಾಡಿ ರಾಜಸ್ವವನ್ನು ಸಲ್ಲಿಸದೆ ಒಂದೇ ಪಾತ್ರ ಪಡೆದು ನಾಲ್ಕೆöÊದು ಟ್ರಿಪುö್ಪ ಸಾಗಾಣಿಕೆ ಮತ್ತು ಬೇರೆ ತಾಲೂಕಿನ ಪಾಸುಗಳನ್ನು ದುರುಪಯೋಗಪಡಿಸಿಕೊಂಡು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ.


ಟಾಸ್ಕ್ ಫೋರ್ಸ್ ಸಮಿತಿಯವರಾಗಲಿ ಸಂಬAಧಪಟ್ಟ ಅಧಿಕಾರಿಗಳಾಗಲಿ ಯಾರೊಬ್ಬರೂ ಈ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಗಟ್ಟಲು ಆಸಕ್ತಿ ತೋರುತ್ತಿಲ್ಲ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಗ್ರೇಡ್ _೨ ತಹಸಿಲ್ದಾರ್ ಮಂಜುನಾಥ ಅಮಾಸಿಯವರು ಹಿರಿಯ ಅಧಿಕಾರಿ ಗಮನಕ್ಕೆ ತರುವುದಾಗಿ ಹೇಳಿದರು.
ಮಹಾಂತೇಶ ಮಣಕವಾಡ ಪ್ರವೀಣ ಆಚಾರಿ ಮಾಂತೇಶ ಉಮಚಗಿ ಕೈಸರ್ ಮೊಹಮ್ಮದ್ ಅಲಿ ಸುಲೇಮಾನ್ ಆಡೂರ್ ಮಲ್ಲಿಕ್ ಕಡಕೋಳ ಬಸವರಾಜ ಅಮರಾಪುರ ರಾಜು ಅಮರಾಪುರ ಅಯ್ಯಪ್ಪ ಪಾಟೀಲ್ ಅಶೋಕ್ ಕುರಿ ಖಾದರ್ ಸಾಬ್ ಶಿರಹಟ್ಟಿ ಜಲಾನಿ ಸಿದ್ದಿ ಇದ್ದರು.