
ಕಲಬುರಗಿ. ಮೇ, 23- ನಗರದ ಹೊರವಲಯದಲ್ಲಿರುವ ನಂದಿಕುರ ಗ್ರಾಮ ಪಂಚಾಯತಗೆ ಒಳಪಡಲಿರುವ ತೇಲಕರ ನಗರ ಸೇರಿದಂತೆ ನಂದಿಕುರ ತಾಂಡಾ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ಕೊಡುವುದಾಗಿ ಕಲಬುರ್ಗಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 20 ಲಕ್ಷ ರೂ. ಆರ್ಥಿಕ ಧನಸಾಯದಿಂದ ತೇಲ್ಕರ್ ನಗರದ ರಸ್ತೆ ಅಭಿವೃದ್ಧಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ತಮ್ಮ ಶಾಸಕರ ಅನುದಾನದಲ್ಲಿ ಖಣದಾಳ ಪ್ರೌಢಶಾಲೆಯಲ್ಲಿ ಒಂದು ಪದವಿ ಪೂರ್ವ ಕಾಲೇಜನ್ನು ನಿರ್ಮಿಸಿ ಕೇಂದ್ರ ಕಾರಾಗೃಹದ ( ಸೆಂಟ್ರಲ್ ಜೈಲ್ ) ಸಮೀಪ ಒಂದು ಸುಸ್ತಜ್ಜಿತ ಗ್ರಂಥಾಲಯವನ್ನು ನಿರ್ಮಿಸುವುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಂದಿಕುರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಪವನಕುಮಾರ ವಳಕೇರಿ ಅವರು, ಕೇಂದ್ರ ಕಾರಾಗೃಹದ ಪಕ್ಕದಲ್ಲಿಯ ಒಂದು ರುದ್ರ ಭೂಮಿಯನ್ನು ಈಗಾಗಲೇ ನಿರ್ಮಿಸಲಾಗಿದ್ದು ಅದಕ್ಕೆ ಕಾಂಪೌಂಡ್ ವ್ಯವಸ್ಥೆಯನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಕೂಡಲೇ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಅನಿತಾ ಪವನಕುಮಾರ ವಳಕೇರಿ, ಸನಿಧ್ಯ ವಿಜಯಕುಮಾರ ಶರಣರು ನಂದಿಕೂರ, ಚಂದ್ರಕಾಂತ ಸೀತನೂರ ಮಾಜಿ ಅಧ್ಯಕ್ಷರು ಗ್ರಾ ಪಂ ನಂದಿಕೂರ್,ಶಾಮರಾವ್ ಪಾಟೀಲ, ಶರಣಗೌಡ ಪಾಟೀಲ, ಶಂಕರ ಕಾರಬಾರಿ,ರಮೇಶ ನೈಕೋಡಿ, ವಿಜಯಕುಮಾರ ರಾಠೋಡ, ಸುರೇಶ ಬಡಗೇರ, ಗಣಪತಿ ಬಬಲಾದ, ಶ್ರೀಕಾಂತ್ ಉಳ್ಳಿ, ಶ್ರೀಮಂತ ರಾಠೋಡ,ನಾಗೇಶ ಮುಚಖೆಡ, ಬಸವರಾಜ ಜೇಮಶೆಟ್ಟಿ, ಪವನಕುಮಾರ ಬಿ ವಳಕೇರಿ, ಸಂಗಣ್ಣಗೌಡ ಸೀತನೂರ್, ಮಾಳಪ್ಪ ನೈಕೋಡಿ, ಮಂಜುಶ್ರೀ ಜಾಗಿರದಾರ ಕಾರ್ಯದರ್ಶಿ ಗ್ರಾ ಪಂ ನಂದಿಕೂರ ವಿಠ್ಠಬಾಯಿ ಪಾಟೀಲ ಉಪಸ್ಥಿತರಿದ್ದರು.






















