
ನಗರದ ಯಲಹಂಕದ ರಮಡಾ ರೆಸಾರ್ಟ್ನಲ್ಲಿ ಇಂದು ನಡೆದ ಬೆಂಗಳೂರು ಉತ್ತರ ಜಿಲ್ಲೆಯ ಪಂಡಿತ್ ದೀನದಯಾಳ್ ಉಪಾಧ್ಯಾಯ ಬಿಜೆಪಿ ಪ್ರಶಿಕ್ಷಣ ಮಹಾಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರವರು ಉದ್ಘಾಟಿಸಿದರು. ವಿಪಕ್ಷ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರುಗಳಾದ ಭೈರತಿ ಬಸವರಾಜ್, ಲೆಹರ್ ಸಿಂಗ್, ಎಸ್.ಆರ್. ವಿಶ್ವನಾಥ್, ಕೆ. ಗೋಪಾಲಯ್ಯ, ಮತ್ತಿತರರು ಉಪಸ್ಥಿತರಿದ್ದರು.
























