
ಬೆಂಗಳೂರು.ಮೇ೨೩: ಬಹು ನಿರೀಕ್ಷಿತ ಮಧುಮೇಹ ಕುರಿತ ೧೦ನೇ ಎಡಿಸಿ ಸಮ್ಮೇಳನ ಇಲ್ಲಿನ ‘ಚಾನ್ಸಲರಿ ಪೆವಿಲಿನ್ಲ್‌ನಲ್ಲಿ ಶನಿವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.
ದೇಶದ ವಿವಿಧ ಕಡೆಗಳಿಂದ ಬಂದಿರುವ ಸಾವಿರಕ್ಕೂ ಹೆಚ್ಚು ವೈದ್ಯರು ಹಾಗೂ ನೂರಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು (ಉಪನ್ಯಾಸಕರು) ಸೇರಿದಂತೆ ವೈದ್ತಕೀಯ ಕ್ಷೇತ್ರದ ಗಣ್ಯರು ಭಾಗವಾಹಿಸಿದ್ದಾರೆ.
ಎರಡು ದಿನಗಳ ಈ ಸಮ್ಮೇಳನ ದಲ್ಲಿ ಡಯಾಬೆಟಲಾಜಿಸ್ಟ್, ಎಂಡೋ ಕ್ರಿನಲಾಜಿಸ್ಟ್, ಫಿಸಿಷಿಯನ್, ಆರೋಗ್ಯ ಕ್ಷೇತ್ರದ ಗಣ್ಯರು ಒಂದೆಡೆ ಸೇರಿರುವುದು ವಿಶೇಷ. ಮಧುಮೇಹ ನಿಯಂತ್ರಣ ಕುರಿತ ಪ್ರಾಸ್ತಾವಿಕ ನುಡಿ, ಗುಂಪು ಚರ್ಚೆ ಹಾಗೂ ಪ್ರಾಯೋಗಿಕ ಆಗುಹೋಗುಗಳ ಅರಿವು ಕುರಿತ ಚರ್ಚೆಗಳು ಸಮ್ಮೇಳನದ ವಿಶೇಷವಾಗಿದೆ.
ಖ್ಯಾತ ಮಧುಮೇಹ ತಜ್ಞರಾದ ಡಾ. ಕಮಲಾಕರ ತ್ರಿಪಾಠಿ, ಡಾ. ಕೆ.ಕೆ. ಪರೀಕ್, ಡಾ. ಬನ್ಶಿ ಸಾಬು, ಡಾ. ಅನೂಜ್ ಮಹೇಶ್ವರಿ, ಮತ್ತು ಡಾ. ಜ್ಯೋತಿದೇವ್ ಕೇಶವ್‌ದೇವ್ ಸಮ್ಮೇಳನದಲ್ಲಿ ಮಾತನಾಡಿದರು. ಬೆಂಗಳೂರು ಬಸವೇಶ್ವರ ನಗರದ, ‘ಡಾ. ಅರವಿಂದ್ ಡಯಾಬಿಟಿಸ್ ಸೆಂಟರ್ ಅಧ್ಯಕ್ಷ ಮತ್ತು ಚೀಫ್ ಡಯಾಬೆಟಲಾಜಿಸ್ಟ್ ಹಾಗೂ ‘ಆರೆಸ್‌ಎಸ್‌ಡಿಐ ಉಪಾಧ್ಯಕ್ಷ ಡಾ. ಅರವಿಂದ್ ಜೆ. ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಮಧುಮೇಹ ನಿರ್ವಹಣೆ, ಆರೋಗ್ಯ ಕುರಿತ ಮುಂಜಾಗ್ರತೆ ಹಾಗೂ ವಿವಿಧ ಶಿಸ್ತುಗಳ ಸಹಯೋಗದಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಬೆಳಕು ಚೆಲ್ಲಲಿದೆ.
ಕಳೆದ ಒಂದು ದಶಕದಲ್ಲಿ ಆಗಿರುವ ಶೈಕ್ಷಣಿಕ ಪ್ರಗತಿ ಕುರಿತು ಈ ಎಡಿಸಿ ಸಮ್ಮಳನದಲ್ಲಿ ಚರ್ಚೆ ಆಗಲಿದೆ.























